ಕಲಬುರಗಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಂಸದ ಉಮೇಶ್ ಜಾಧವ್ ನೆರವಾದರು.
ಜೇವರ್ಗಿ- ವಿಜಯಪುರ 218ರ ರಾಷ್ಟ್ರೀಯ ಹೆದ್ದಾರಿಯ ಶಿವಣಗಿ ಬಳಿ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳು ರಸ್ತೆಯಲ್ಲೇ ನರಳಾಡುತ್ತಿದ್ದರು. ಇದೇ ರಸ್ತೆಯಲ್ಲಿ ಕೆಲಸದ ನಿಮಿತ್ತ ವಿಜಯಪುರಕ್ಕೆ ತೆರಳುತ್ತಿದ್ದ ಉಮೇಶ್ ಜಾಧವ್ ತಮ್ಮ ಕಾರು ನಿಲ್ಲಿಸಿ ಇಬ್ಬರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಓದಿ: ಹುಬ್ಬಳ್ಳಿ : ಕುಡುಕ ಗಂಡನ ತಲೆಯನ್ನೇ ಒಡೆದಳು ಪತ್ನಿ !
ನಂತರ ಗಾಯಾಳುಗಳಿಗೆ ಧೈರ್ಯತುಂಬಿ, 108 ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ನಂತರ ವಿಜಯಪುರ ಎಸ್ಪಿ ಅನೂಪ್ ಅಗರವಾಲ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.