ಕಲಬುರಗಿ: ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಕುಸಿದು ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ.
ಹಲಕರ್ಟಿ ಗ್ರಾಮದ ಮಲ್ಲಣ್ಣ ಇಸಬಾ (68) ಮೃತ ಕಾರ್ಮಿಕ. ನಿನ್ನೆ(ಮಂಗಳವಾರ) ಬೆಳಗ್ಗೆ ಹೊಳೆತ್ತುವ ಕೆಲಸ ನಡೆಯುತ್ತಿತ್ತು. ಈ ವೇಳೆ ಕುಸಿದು ಬಿದ್ದಿರುವ ಮಲ್ಲಣ್ಣ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೇಲ್ಸ್ ಮ್ಯಾನೇಜರ್ ಆತ್ಮಹತ್ಯೆ: ನಗರದ ಬಿಗ್ ಬಜಾರ್ನಲ್ಲಿಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅಕ್ಕಮಹಾದೇವಿ ಲೇಔಟ್ನಲ್ಲಿ ನಡೆದಿದೆ.
ಅಂಬಾರಾಯ ಘಂಟಿ (30) ನೇಣಿಗೆ ಶರಣಾದ ವ್ಯಕ್ತಿ. ಈತ ಅಕ್ಕ ಮಹಾದೇವಿ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಚೌಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಂತಿದ್ದ ಟ್ರ್ಯಾಕ್ಟರ್ಗೆ ವ್ಯಾನ್ ಡಿಕ್ಕಿ: ನಾಲ್ವರ ದುರ್ಮರಣ