ETV Bharat / state

ಕಲಬುರಗಿಯಲ್ಲಿ 300 ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ: ಇಲಾಖೆ ವಿನೂತನ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ - Karate Training for Girls

Karate Training for Girls: ಆತ್ಮರಕ್ಷಣೆ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ.

Karate training for 300 girls in Kalaburagi
ಕಲಬುರಗಿಯಲ್ಲಿ 300 ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ
author img

By ETV Bharat Karnataka Team

Published : Sep 5, 2023, 10:58 PM IST

ಕಲಬುರಗಿ: ಹೆಣ್ಣು ಮಕ್ಕಳ ಆತ್ಮರಕ್ಷಣೆ ಹಿತದೃಷ್ಟಿಯಿಂದ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್​ (ಸ್ವ-ಆತ್ಮರಕ್ಷಣೆ) ಮಾಡಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ತರಬೇತಿಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿನಿಯರ ವಸತಿ ನಿಲಯಗಳು ಶಾಲಾ ಕಾಲೇಜುಗಳಿಂದ ದೂರ ಇವೆ. ಕಾಲೇಜು ಮುಗಿಸಿ ವಾಪಾಸ್​ ಆಗುವ ವೇಳೆ ಅವರಿಗೆ ರೈಲ್ವೆ ಮತ್ತು ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಮಾನಸಿಕ ಹಾಗೂ ದೈಹಿಕ, ದೌರ್ಜನ್ಯ ನಡೆಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಕರಾಟೆ ತರಬೇತಿ ನೀಡಲಾಗುತ್ತಿದೆ.

Karate training for 300 girls in Kalaburagi
ಕಲಬುರಗಿಯಲ್ಲಿ 300 ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ

ಕಲಬುರಗಿ ಜಿಲ್ಲೆಯ 18 ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ನಗರ ಪ್ರದೇಶದ ಪೋಸ್ಟ್ ಮ್ಯಾಟ್ರಿಕ್ ಕೆ.ಎನ್.ಜೆಡ್ 1 ಮತ್ತು ಕೆ.ಎನ್.ಜೆಡ್ 2, ತಾವರಗೇರಾ, ವಿಶ್ವವಿದ್ಯಾಲಯ ಆವರಣದ ವಸತಿ ಶಾಲೆ, ಪಟೇಲ್ ನಗರ, ಮದಿನಾ ಕಾಲೊನಿ ಹಾಗೂ ವಿದ್ಯಾನಗರ ಸೇರಿ 7 ವಸತಿ ಶಾಲೆಗಳ 300 ವಿದ್ಯಾರ್ಥಿನಿಯರಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ ಕರಂಗಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದ 11 ಮಹಿಳಾ ವಸತಿ ಶಾಲೆಗಳಲ್ಲಿ ಪ್ರತಿ ಭಾನುವಾರ ತರಬೇತಿ ನೀಡಲಾಗುತ್ತಿದೆ. ಎರಡು ಮೂರು ತರಬೇತಿಗಳು ಮಾಡಿದ್ದೇವೆ. ಆತ್ಮರಕ್ಷಣೆ ಮಾಡಿಕೊಳ್ಳುವ ತರಬೇತಿಗಳಲ್ಲಿ ಥಿಯರಿ ಮತ್ತು ಟ್ರಯಲ್ ತರಬೇತಿ ಕಲಿಸುತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಕರಾಟೆ ಕೋಚ್ ಮತ್ತು ಸಿಂಗಾಪುರದಲ್ಲಿ ನಡೆದ 2014ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ವಿಜೇತರಾದ ಜಮುನಾ ಕೆ ಶುಕ್ಲಾ ಅವರು ಮಾಹಿತಿ ನೀಡಿದ್ದಾರೆ.

ಪ್ರತಿಯೊಂದು ವಸತಿ ಶಾಲೆಗೆ ಮೂರು ತಿಂಗಳಲ್ಲಿ 12 ತರಬೇತಿ ನೀಡುವ ಉದ್ದೇಶ ಇದೆ. ವಾರದಲ್ಲಿ 3-4 ತರಬೇತಿ ನೀಡುತ್ತಿದ್ದೇವೆ. ವಿದ್ಯಾರ್ಥಿನಿಯರಿಗೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವುದೇ ಮುಖ್ಯ ಗುರಿಯಾಗಿದೆ. ಈ ತರಬೇತಿಗಳಿಂದ ವಿದ್ಯಾರ್ಥಿನಿಯರಿಗೆ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ಪೋರ್ಟ್ಸ್ (ಕ್ರೀಡಾ) ಪಟುಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಲ್ಲಕಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಆತ್ಮರಕ್ಷಣೆಯಲ್ಲಿ ಕ್ರಿಯಾಶೀಲರಾಗಿ ಬೆಳೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆಯಲು 2-3 ವರ್ಷಗಳ ನಿರಂತರ ತರಬೇತಿ ಬೇಕಾಗುತ್ತದೆ. ಇದಕ್ಕೆ ವಿಶೇಷ ಕೋರ್ಸ್​ಗಳು ಇರುತ್ತವೆ. 40 ಸಾವಿರ ಖರ್ಚು ಬರುತ್ತದೆ. ತರಬೇತಿ ಸೇರ್ಪಡೆಯಾಗುವವರಿಗೆ ವೈಟ್ ಬೆಲ್ಟ್ ಎಂದು ಕರೆಯುತ್ತಾರೆ. ಮೂರು ತಿಂಗಳ ನಂತರ ಯೆಲ್ಲೊ ಬೆಲ್ಟ್, ಆರೆಂಜ್ ಬೆಲ್ಟ್, ಗ್ರಿನ್ ಬೆಲ್ಟ್, ಬಿಯೊ, ಪರ್ಪಲ್, ಪರ್ಪಲ್ ಗಾರ್ಡ್, ಬ್ರೌನ್ ಬೆಲ್ಟ್, ಬ್ರೌನ್ 1, ಬ್ಯೌನ್ 2 ಹಾಗೂ ಬ್ಲ್ಯಾಕ್ ಬೆಲ್ಟ್​ಗೆ ಹೀಗೆ ಕೋರ್ಸ್​ಗಳು ಇವೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಸದ್ಯ ಸ್ಟ್ರೀಟ್ ಫೈಟ್, ಸ್ಪೋರ್ಟ್ಸ್ ಫೈಟ್ ತರಬೇತಿ ನೀಡುತ್ತಿದ್ದೇವೆ. "ಸ್ಟ್ರೀಟ್ ಫೈಟ್"ನಲ್ಲಿ ನಾವು ರೈಲ್ವೆ, ಬಸ್ ನಿಲ್ದಾಣ, ಶಾಲಾ-ಕಾಲೇಜು ಹಾಗೂ ಉದ್ಯೋಗ ಮುಗಿಸಿ ವಾಪಾಸು ಬರುವಾಗ ನಿರ್ಜನ ಪ್ರದೇಶದಲ್ಲಿ ಆಕಸ್ಮಾತ್​ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಯತ್ನಿಸಿದರೆ, ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ಕಲಿಸುತ್ತಿದ್ದೇವೆ. ಸ್ಪೋರ್ಟ್ಸ್ ಫೈಟ್​ನಲ್ಲಿ ಯಾವುದೇ ರೀತಿಯ ಡ್ಯಾಮೇಜ್ (ಹಾನಿ) ಮಾಡುವುದು ಇರುವುದಿಲ್ಲ. ಕೇವಲ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕರಾಟೆ ತರಬೇತಿಗಳ ಮೂಲಕ ಜೀವನ ಕಟ್ಟಿಕೊಳ್ಳಬಹುದು. ಕ್ರೀಡಾ ಪಟ್ಟುಗಳಾಗಿ ದೇಶದ ಕೀರ್ತಿ ಹೇಗೆ ಹೆಚ್ಚಿಸಲು ಮಾಡಿಕೊಲ್ಳುವ ಸಿದ್ಧತೆಗಳ ಬಗ್ಗೆ ತಿಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ತರಬೇತಿ ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ಶಾಲೆಗಳ ಹೆಣ್ಣು ಮಕ್ಕಳ ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಸೇಲ್ಫ್ ಡಿಫೆಂಸ್ ತರಬೇತಿ ಮಾಡಲಾಗುತ್ತಿದೆ. ಕರಾಟೆ ಕೋಚ್ ಗಳ ಕೊರತೆಯಿಂದ ಕೆಲವು ಕಡೆಗೆ ತರಬೇತಿ ಆರಂಭಿಸಿಲ್ಲ. ಶೀಘ್ರದಲ್ಲಿ ಆರಂಭಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳುತ್ತಾರೆ.

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯಿತ್ ಸಿಇಒ ಭನವರ್ ಸಿಂಗ್ ಮೀನಾ ಅವರ ಮಾರ್ಗದರ್ಶನದಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಈ ಕರಾಟೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲಾಖೆಯಡಿಯಲ್ಲಿರುವ ಮೌಲಾನಾ ಅಜಾದ್ ಮಾದರಿ ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿತದ ವರ್ಗಗಳ ಶಾಲೆಗಳಿಗೆ ವಿಸ್ತರಿಸುವ ಚಿಂತೆ ಇದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ ಕರಂಗಿ ಮಾಹಿತಿ ನೀಡಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಯುವ ಆಸೆ ಇರುತ್ತದೆ. ದಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು. ಆ ಆಸೆ ಕೇವಲ ಆಸೆಯಾಗಿ ಉಳಿಯದೇ ಇದ್ದೊಂದು ಸ್ಪೊರ್ಟ್ಸ್ ಆಗಿ ಬೆಳೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬುದಾಗಿದೆ ಎನ್ನುತ್ತಾರೆ ಅಂತಾರಾಷ್ಟ್ರೀಯ ಕರಾಟೆ ಕೋಚ್ ಮತ್ತು 2014ರ ಸಿಂಗಾಪುರ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ವಿಜೇತೆ- ಜಮುನಾ ಕೆ ಶುಕ್ಲಾ.

ಇಲಾಖೆಯ ಮಟ್ಟದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿರುವುದು ಸ್ವಾಗತಕರ ವಿಷಯ. ತರಬೇತಿಗಳು ಕೇವಲ ವಸತಿ ಶಾಲೆಗಳಿಗೆ ಸಿಮಿತಗೊಳ್ಳಿಸದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವಂತಹ ತರಬೇತಿಗಳು ನಡೆಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಪರ ಹೋರಾಟಗಾರ್ತಿ ಶೈನಾಜ್ ಅಕ್ತರ್.

ಕರಾಟೆ, ಎನ್.ಸಿ.ಸಿ ತರಬೇತಿ ಇವೆಲ್ಲವೂ ಕೇವಲ ಪುರುಷರಿಗೆ ಮಾತ್ರ. ಹೆಣ್ಣು ಮಕ್ಕಳು ಕೇವಲ ಮನೆಗಳಿಗೆ ಸೀಮಿತಗೊಳಿಸುವ ಹುನ್ನಾರಗಳ ನಡುವೆ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕರಾಟೆ ತರಬೇತಿ ನಿಜಕ್ಕೂ ಒಳ್ಳೆಯದಾಗಿದೆ. ಹೆಣ್ಣು ಮಕ್ಕಳಿಗೆ ಇಂತಹ ತರಬೇತಿಗಳು ತುಂಬಾ ಅಗತ್ಯವಾಗಿದೆ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರರ ಮತ್ತು ಆರ್.ಟಿ.ಐ ಕಾರ್ಯಕರ್ತ ರಿಯಾಝ್ ಖತೀಬ್.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯ: ಕಲಬುರಗಿಯ ಮನೋಹರ ಕುಮಾರ ಬೀರನೂರ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.