ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ನವೆಂಬರ್ 22 ರಿಂದ ನಾಗರಿಕ ವಿಮಾನಯಾನ ಸೇವೆ ಪ್ರಾರಂಭಗೊಳ್ಳುತ್ತಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಸ್ಟಾರ್ ಏರ್ಸ್ ನ.22 ರಿಂದ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿ, ಈಗಾಗಲೇ ಬುಕ್ಕಿಂಗ್ ಸಹ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸೇವೆ ಉದ್ಘಾಟನೆಗೆ ಪ್ರಧಾನಿ ಅವರನ್ನು ಕರೆತರುವ ಪ್ರಯತ್ನ ನಡೆಸಲಾಗಿದೆ. ಮುಖ್ಯಮಂತ್ರಿಗಳನ್ನೂ ಕರೆಯಿಸಬೇಕೆಂದು ಚಿಂತನೆ ನಡೆಸಿದ್ದೇವೆ. ಉದ್ಘಾಟನೆ ಪ್ರಾಮುಖ್ಯತೆ ಪಡೆದಿಲ್ಲ. ಜನರಿಗೆ ನಾಗರಿಕ ವಿಮಾನಯಾನ ಸೇವೆ ಸಿಗುತ್ತಿದೆ ಎಂಬುದೇ ಮುಖ್ಯವಾಗಿದೆ ಎಂದರು.