ಕಲಬುರಗಿ: ನಗರದ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದಿಂದ ಮಂಜಮ್ಮ ಜೋಗತಿ ಸೇರಿ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು.
ಹಿರಿಯ ವಿಜ್ಞಾನಿಗಳಾದ ಡಾ.ಕಿರಣ್ ಕುಮಾರ್, ಡಾ.ಸತೀಶ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಡಾ ಮಂಜಮ್ಮ ಜೋಗತಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕದ ಹರಿಹರದ ಶಿವಯೋಗಾಶ್ರಮದ ಶರಣಬಸವಲಿಂಗ ಶಿವಯೋಗಿಗಳಿಗೆ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ಬಸವರಾಜಪ್ಪ ಅಪ್ಪ(ಮರಣೋತ್ತರ) ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಕುಲಾಧಿಪತಿ ತಿಳಿಸಿದರು.
ವಿವಿಯ 3ನೇ ಮತ್ತು 4ನೇ ಘಟಿಕೋತ್ಸವ ಸಂದರ್ಭದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಇದಲ್ಲದೆ ಹಿರಿಯ ಪ್ರಾಧ್ಯಾಪಕ ಡಾ.ಎಸ್.ಜಿ.ಡೊಳ್ಳೇಗೌಡರಿಗೆ ಡಿ.ಲಿಟ್ ಪ್ರಶಸ್ತಿ ಹಾಗೂ 2,382 ವಿದ್ಯಾರ್ಥಿಗಳಿಗೆ ಪದವಿ, 337 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸುವುದಾಗಿಯೂ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ : ಸ್ವಚ್ಛತೆ ಕಾಪಾಡಿ ಮಾದರಿಯಾದ ಪರಪ್ಪನ ಅಗ್ರಹಾರ ಕಾರಾಗೃಹ