ETV Bharat / state

ಕಲಬುರಗಿ ಹೈಅಲರ್ಟ್.. ಬುದ್ಧಿ ಇಲ್ಲದೇ ಬೀದಿಗೆ ಬಂದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು.. - ಕೊರೊನಾ ವೈರಸ್

ಕೊರೊನಾ ವೈರಸ್​ಗೆ ಎರಡನೇ ಬಲಿಯಾದ ಮೇಲೆ ಕಲಬುರಗಿ ಜಿಲ್ಲೆಯಲ್ಲಿ ಹೈ ಅಲರ್ಟ್​ ಮಾಡಿದ್ದರೂ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Kalaburagi
lati carge
author img

By

Published : Apr 10, 2020, 11:06 AM IST

ಕಲಬುರಗಿ : ನಾಯಿ ಬಾಲ ಡೊಂಕು ಅನ್ನೋ ಹಾಗೆ ಲಾಕ್‌ಡೌನ್ ಪಾಲಿಸುವಂತೆ ಎಷ್ಟೇ ಹೇಳಿದ್ರೂ ಕೇಳದ ಕಲಬುರಗಿ ಜನರಿಗೆ ಪೊಲೀಸರು ಭರ್ಜರಿ ಲಾಠಿ ಪ್ರಸಾದ ನೀಡಿದ್ದಾರೆ.

ಲಾಠಿ ಬಿಸಿ ಮುಟ್ಟಿಸಿದ ಪೊಲೀಸರು..

ಕೊರೊನಾ ವೈರಸ್​ಗೆ ಎರಡನೇ ಬಲಿಯಾದ ಮೇಲೆ ಜಿಲ್ಲೆಯಲ್ಲಿ ಫುಲ್‌ ಟೈಟ್‌ ಮಾಡಲಾಗಿದೆ. ಅನಾವಶ್ಯಕವಾಗಿ ರಸ್ತೆಗಿಳಿದಿದ್ದ 2,864 ವಾಹನಗಳನ್ನು ಸೀಜ್​ ಮಾಡಲಾಗಿದೆ. ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ 9 ಜನರನ್ನು ಬಂಧಿಸಲಾಗಿದೆ.

ಅನಗತ್ಯ ರಸ್ತೆಯಲ್ಲಿ ಓಡಾಡಬೇಡಿ, ಗುಂಪು ಸೇರಬೇಡಿ ಅಂದ್ರೂ ಕೇಳದ ಸಾರ್ವಜನಿಕರಿಗೆ ಪೊಲೀಸರು ಅಟ್ಟಾಡಿಸಿ ಮನೆ ಸೇರುವಂತೆ ಮಾಡಿದ್ದಾರೆ. ಮಾರಕ ಕೊರೊನಾಗೆ ಕಡಿವಾಣ ಹಾಕಲು ಲಾಕ್‌ಡೌನ್,144 ನಿಷೇಧಾಜ್ಞೆ ಆದೇಶ ಪಾಲಿಸುವಂತೆ ಪರಿಪರಿಯಾಗಿ ಪೊಲೀಸರು ಹೇಳಿದ್ರೂ, ರೋಜಾ, ದರ್ಗಾ, ಮಹೇಬೂಬ ನಗರ ಸೇರಿ ಹಲವು ಬಡಾವಣೆ ಜನರು ಆದೇಶಕ್ಕೆ ಕ್ಯಾರೇ ಎಂದಿರಲಿಲ್ಲ. ಅನಗತ್ಯ ರಸ್ತೆ ಮೇಲೆ ಸವಾರರು ತಿರುಗಾಡುತ್ತಿದ್ದರು. ಹೀಗಾಗಿ ಪೊಲೀಸರು ಲಾಠಿಗೆ ಕೆಲಸ ಕೊಟ್ಟು ಬೀದಿ ಹೋಕರಿಗೆ ಲಾಕ್‌ಡೌನ್ ಪಾಲನೆಯ ಪಾಠ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.