ETV Bharat / state

Kalaburagi crime : ಮೃತ ಹೆಡ್ ಕಾನ್ಸ್​ಟೇಬಲ್ ಮಯೂರ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ; 1 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಅಕ್ರಮ ಮರಳು ಸಾಗಾಟ ತಡೆಯಲು‌ ಹೋಗಿದ್ದ ಮೃತ ಹೆಡ್ ಕಾನ್ಸ್​ಟೇಬಲ್ ಕುಟುಂಬಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪರಿಹಾರ ನೀಡಿದರು.

ಪರಿಹಾರದ ಚೆಕ್ ವಿತರಣೆ
ಪರಿಹಾರದ ಚೆಕ್ ವಿತರಣೆ
author img

By

Published : Jun 20, 2023, 4:20 PM IST

ಕಲಬುರಗಿ : ಇತ್ತೀಚಿಗೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಹರಿಸಿದ್ದರಿಂದ ಹತ್ಯೆಗೀಡಾಗಿದ್ದ ನೆಲೋಗಿ ಪೊಲೀಸ್ ಠಾಣೆ ಹೆಡ್ ಕಾನ್​ಸ್ಟೇಬಲ್​​ ಮಯೂರ ಅವರ ಕುಟುಂಬಸ್ಥರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚವಡಾಪುರ ತಾಂಡಾದ ನಿವಾಸದಲ್ಲಿ ಭೇಟಿಯಾಗಿ ಸಾಂತ್ವನ‌ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೂ. 1 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ, ಮೃತ ಮಯೂರ ಅವರ ಸಂಬಳ ಹಾಗೂ ಇತರೆ ಸೌಲಭ್ಯ ಸೇರಿದಂತೆ ರೂ. 40 ಲಕ್ಷ ರೂ. ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು ಕುಟುಂಬ ವರ್ಗದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಅಭಯ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಹಿಂದಿನ‌ ಸರ್ಕಾರದಲ್ಲಿ ನೇಮಕವಾದ ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆ, ಜೂಜು ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಸಾಗಾಣಿಕೆ ಮಾಡುವವರು ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ‌ ಬಂಧಿಸಲಾದ ಆರೋಪಿ ಯಾವ ಪಕ್ಷದ ನಾಯಕರೊಂದಿಗೆ ಇದ್ದಾನೆಯೋ ಅವರೇ ಈಗ ಉತ್ತರಿಸಲಿ ಎಂದು ಹೇಳಿದರು.

ಕೊಲೆ ಆರೋಪಿ ಕಾಲಿಗೆ ಗುಂಡು : ಜೇವರ್ಗಿ ತಾಲೂಕಿನ ಹುಲ್ಲೂರ್ ಚಕ್‌ಪೊಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ‌ ಜೂನ್ 15ರಂದು ಹೆಡ್ ಕಾನ್ಸ್​ಟೇಬಲ್ ಮಯೂರ್ ಚೌಹಾನ್ (51) ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸಿದ್ದಪ್ಪನನ್ನು ಬಂಧಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಪಿಎಸ್​​ಐ ಬಸವರಾಜ ಚಿತ್ತಕೋಟೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಅಲರ್ಟ್ ಆದ ಜೇವರ್ಗಿ ಠಾಣೆ ಪಿಎಸ್​ಐ ಸಂಗಮೇಶ್ ಅಂಗಡಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದರು. ಆದರೂ ಶರಣಾಗದ ಆರೋಪಿ ಸಾಯಿಬಣ್ಣ ಬಲಗಾಲಿಗೆ ಗುಂಡು ಹಾರಿಸಿದ್ದರು. ಮತ್ತೊಂದೆಡೆ ಈ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದಡಿ ಜೇವರ್ಗಿ ಸಿಪಿಐ ಭೀಮನಗೌಡ್, ನೆಲೋಗಿ ಠಾಣೆ ಪಿಎಸ್​​ಐ ಗೌತಮ್ ಮತ್ತು ಕಾನ್​ಸ್ಟೇಬಲ್ ರಾಜಶೇಖರ್ ಅವರನ್ನು ಎಸ್ಪಿ ಇಶಾ ಪಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ : Kalaburagi crime: ಹೆಡ್ ಕಾನ್​ಸ್ಟೇಬಲ್​ ಹತ್ಯೆ ಪ್ರಕರಣ.. ಪ್ರಮುಖ‌ ಆರೋಪಿ ಕಾಲಿಗೆ‌ ಪೊಲೀಸರಿಂದ ಗುಂಡೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.