ETV Bharat / state

ಕಲಬುರಗಿಯಲ್ಲಿ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ

ಸದ್ಯ ಜಿಲ್ಲೆಯಲ್ಲಿ 3,251 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 4,788 ಜನರ ವರದಿ ಬರುವುದು ಬಾಕಿ ಇದೆ. ಇಲ್ಲಿವರೆಗೆ ಒಟ್ಟು 378 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.‌ 25,248 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕಲಬುರಗಿ
ಕಲಬುರಗಿ
author img

By

Published : Apr 17, 2021, 10:12 PM IST

ಕಲಬುರಗಿ: ಕೊರೊನಾದಿಂದ ರಕ್ಷಣೆಗಾಗಿ ಮಹಾರಾಷ್ಟ್ರ ಲಾಕ್‌ಡೌನ್ ಮಾಡಲಾಗಿದೆ. ಲಾಕ್‌ಡೌನ್ ಆಗುತ್ತಲೇ ಕಲಬುರಗಿ ಜಿಲ್ಲೆಯತ್ತ ಜನ ಮುಖ ಮಾಡಿದ್ದು, ಸೋಂಕಿತರ ಸಂಖ್ಯೆ ನಿತ್ಯ 500ರ ಗಡಿ ಸಮೀಪಿಸುತ್ತಿದೆ.

ಕೊರೊನಾ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಲಾಕ್‌ಡೌನ್ ಮಾಡಲಾಗಿದೆ. ಪಕ್ಕದ ರಾಜ್ಯವಾದ್ದರಿಂದ ದುಡಿಯಲು ಪುನಾ, ಮುಂಬೈ, ಸೋಲಾಪುರಕ್ಕೆ ಹೋಗಿದ್ದ ಕಲಬುರಗಿ ಜನ ಜಿಲ್ಲೆಗೆ ಮರಳುತ್ತಿದ್ದಾರೆ. ರಸ್ತೆ ಮೂಲಕ ಆಗಮಿಸುವವರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣಿಡುತ್ತಿದೆ. 72 ಗಂಟೆ ಒಳಗಾಗಿ ತಪಾಸಣೆ ಮಾಡಿಕೊಂಡ ಆರ್‌ಟಿಪಿಸಿಆರ್ ವರದಿ ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ‌ ಅನುಮತಿ ನೀಡುತ್ತಿದ್ದಾರೆ. ಆದರೆ ರೈಲ್ವೆ ಪ್ರಯಾಣದ ಮೂಲಕ ಆಗಮಿಸುವರ ಬಗ್ಗೆ ಜಿಲ್ಲಡಳಿತ ತೆಲೆ ಕೆಡೆಸಿಕೊಂಡಲ್ಲ. ಹೀಗಾಗಿ ರೈಲಿನ ಮೂಲಕ ರಾಜ್ಯಕ್ಕೆ‌ ಜನ ಹರಿದು ಬಂದು ಜಿಲ್ಲೆಯ ಹಲವಡೆ ತಮ್ಮೂರು ಸೇರುತ್ತಿದ್ದಾರೆ.

ಹೆಚ್ಚಾಗಿ ತಾಂಡಾಗಳಿಂದ ಜನ ದುಡಿಯಲು ತೆರಳಿದ್ದು, ಮರಳಿ ತಾಂಡಾಗಳತ್ತ ಮುಖ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ.‌ ಇದಕ್ಕೆ ಪೂರಕ ಎಂಬಂತೆ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ನೂರರಷ್ಟಿದ್ದ ಸೋಂಕಿತರ ಸಂಖ್ಯೆ ಮೂರು ದಿನಗಳಿಂದ 500ರ ಗಡಿ ದಾಟುತ್ತಿದೆ.

ಸದ್ಯ ಜಿಲ್ಲೆಯಲ್ಲಿ 3,251 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 4,788 ಜನರ ವರದಿ ಬರುವುದು ಬಾಕಿ ಇದೆ. ಇಲ್ಲಿವರೆಗೆ ಒಟ್ಟು 378 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.‌ 25,248 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಒಂದು ವಾರದ ಹಿನ್ನೋಟ:

ದಿನಾಂಕ ಸೋಂಕಿತರ ಸಂಖ್ಯೆಸಾವುಗುಣಮುಖರಾದವರು
ಏಪ್ರಿಲ್ 10 276 2 118
ಏಪ್ರಿಲ್ 11 291 2 236
ಏಪ್ರಿಲ್ 12 335 0 228
ಏಪ್ರಿಲ್ 13 290 4 249
ಏಪ್ರಿಲ್ 14 376 3 260
ಏಪ್ರಿಲ್ 15 624 1 189
ಏಪ್ರಿಲ್ 16 488 3 246
ಏಪ್ರಿಲ್ 17 560 3 211

ETV Bharat Logo

Copyright © 2024 Ushodaya Enterprises Pvt. Ltd., All Rights Reserved.