ETV Bharat / state

ಕಲಬುರಗಿಯಲ್ಲಿ ಆಧಾರರಹಿತ 1.90 ಕೋಟಿ ರೂಪಾಯಿ ವಶಕ್ಕೆ ; ಗದಗ, ಬೆಳಗಾವಿಯಲ್ಲೂ ಹಣ ಜಪ್ತಿ

ಆಧಾರರಹಿತವಾಗಿ ಸಾಗಾಟ ಮಾಡುತ್ತಿದ್ದ 1 ಕೋಟಿ ರೂ.ಗೂ ಅಧಿಕ ಹಣವನ್ನು ಕಲಬುರಗಿ ಪೊಲೀಸರು ಜಪ್ತಿ ಮಾಡಿದ್ದಾರೆ.

author img

By

Published : Mar 23, 2023, 6:53 AM IST

Updated : Mar 23, 2023, 11:01 AM IST

ಕಲಬುರಗಿಯಲ್ಲಿ ಅಕ್ರಮ ಹಣ ಸಾಗಾಟ
ಕಲಬುರಗಿಯಲ್ಲಿ ಅಕ್ರಮ ಹಣ ಸಾಗಾಟ

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ದಾಖಲಾತಿ ಇಲ್ಲದ ಕೋಟ್ಯಂತರ ಹಣ ಹರಿದಾಡುತ್ತಿದೆ. ಜೇವರ್ಗಿ, ಕಮಲಾಪುರ ತಾಲೂಕಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.90 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಗರಳ್ಳಿ ಕ್ರಾಸ್ ಚೆಕ್‌ಪೊಸ್ಟ್​ಸಮೀಪ 50 ಲಕ್ಷ, ಕಿಣ್ಣಿ ಸಡಕ್ ಚೆಕ್‌ಪೋಸ್ಟ್‌ ಬಳಿ 1.40 ಕೋಟಿ ರೂಪಾಯಿ ನಗದು ಸಿಕ್ಕಿದೆ.

ಯಾದಗಿರಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನ‌ ತಪಾಸಣೆ ಮಾಡಿದಾಗ 50 ಲಕ್ಷ ಹಣ ದೊರೆತಿದೆ. ಯಾದವ್ ಎಂಬ ವ್ಯಕ್ತಿ ದಾಖಲೆ ಇಲ್ಲದೇ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಅದರಂತೆ, ಕಿಣ್ಣಿ ಸಡಕ್ ಚೆಕ್‌ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ 1.40 ಕೋಟಿ ನಗದು ದೊರೆತಿದೆ.

  • Karnataka | Around Rs 1.90 crore unaccounted cash seized at Checkposts in Kalaburagi district out of which Rs 1.40 crore seized at Kinni sadak checkpost and Rs 50 lakhs seized at Jewargi checkpost. Ahead of assembly elections in Karnataka, Kalaburagi district administration had… pic.twitter.com/diZnucKKVf

    — ANI (@ANI) March 23, 2023 " class="align-text-top noRightClick twitterSection" data=" ">

ಐಷಾರಾಮಿ ಕಾರಿನಲ್ಲಿ ಹಣ ಪತ್ತೆ: ಜಿಲ್ಲಾ ಪೊಲೀಸರು ಚೆಕ್​ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಅಕ್ರಮವಾಗಿ ಹಣ ಸಾಗಾಟ ಮಾಡುವವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ನಿನ್ನೆ ತಪಾಸಣೆ ವೇಳೆ ದಾಖಲೆ ಇಲ್ಲದಿರುವ ಸುಮಾರು 17 ಲಕ್ಷ 50 ಸಾವಿರ ಹಣ ಪತ್ತೆಯಾಗಿದೆ.

ಗದಗ ತಾಲೂಕಿನ ದೂಂಡೂರ ಚೆಕ್ ಪೋಸ್ಟ್​ ಸಮೀಪ ವಾಹನಗಳ ತಪಾಸಣೆಯ ಸಂದರ್ಭದಲ್ಲಿ ಹಣ ಸಿಕ್ಕಿದೆ. ಗೋವಾದಿಂದ ಗದಗ ತಾಲೂಕಿನ ಕಳಸಾಪೂರ ಗ್ರಾಮಕ್ಕೆ ಹೊರಟಿದ್ದ ಆಡಿ ಕಾರಿನಲ್ಲಿ ದಾಖಲೆ ಇಲ್ಲದೇ ಹಣ ಸಾಗಿಸಲಾಗುತ್ತಿತ್ತು. ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ವಿಶಿಷ್ಠ ಮಾಹಿತಿ ನೀಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿಯಲ್ಲೂ ಹಣ ಜಪ್ತಿ: ಜಿಲ್ಲೆಯ ಕೆಲವೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟೂ 9.97 ಲಕ್ಷ ರೂ. ಹಣವನ್ನು ಬುಧವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಬುಗುಟೆ ಆಲೂರು ಚೆಕ್​ಪೋಸ್ಟ್​​ನಲ್ಲಿ1.90 ಲಕ್ಷ, ರಾಯಭಾಗ ತಾಲೂಕಿನ ಹಾರೂಗೇರಿ ಚೆಕ್​ಪೋಸ್ಟ್​​ನಲ್ಲಿ 4 ಲಕ್ಷ ರೂ., ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಚೆಕ್​ಪೋಸ್ಟ್​​ನಲ್ಲಿ 3.45 ಲಕ್ಷ ರೂ. ಹಾಗೂ ಹಾರೂಗೇರಿ ಚೆಕ್​ಪೋಸ್ಟ್​​ನಲ್ಲಿ 1.62 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಎಸ್​​ಪಿ ಡಾ ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಐಗಳಿ, ಸಂಕೇಶ್ವರ ಹಾಗೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾಖಲಾತಿ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 50 ಲಕ್ಷ ಹಣ ಜಪ್ತಿ.. ಮೂವರು ಆರೋಪಿಗಳು ವಶಕ್ಕೆ

ದಾಖಲೆ ಇಲ್ಲದ ₹50 ಲಕ್ಷ ಜಪ್ತಿ: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಕಾರ್​ನಲ್ಲಿ ಸಾಗಿಸುತ್ತಿದ್ದ ಆಧಾರರಹಿತ ಹಣವನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಊರ್ವಶಿ ಚಿತ್ರಮಂದಿರದ ಬಳಿ 49.79 ಲಕ್ಷ ಹಣ ಪೊಲೀಸರಿಗೆ ಸಿಕ್ಕಿತ್ತು. ಆರೋಪಿಗಳಾದ ಪವನ್, ಗೋಪಿ ಹಾಗೂ ಮಲ್ಲಿಕಾರ್ಜುನ್ ಎಂಬವರನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಚಾಮರಾಜನಗರ ಪೊಲೀಸರ ಭರ್ಜರಿ ಬೇಟೆ.. ಅಕ್ರಮವಾಗಿ ಸಾಗಿಸುತ್ತಿದ್ದ 45 ಲಕ್ಷ ರೂ. ವಶಕ್ಕೆ

Last Updated : Mar 23, 2023, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.