ETV Bharat / state

ದಾವಣಗೆರೆ: ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಆರು ಜನರಿಗೆ ಗಾಯ - cylinder explosion

ದಾವಣಗೆರೆಯಲ್ಲಿ ಸಿಲಿಂಡರ್​​​ ಸ್ಫೋಟಗೊಂಡು ಒಂದೇ ಕುಟುಂಬದ ಆರು ಸದಸ್ಯರು ಗಾಯಗೊಂಡಿದ್ದಾರೆ.

ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಆರು ಜನರಿಗೆ ಗಾಯ
ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಆರು ಜನರಿಗೆ ಗಾಯ (ETV Bharat)
author img

By ETV Bharat Karnataka Team

Published : Oct 4, 2024, 1:58 PM IST

Updated : Oct 4, 2024, 3:44 PM IST

ದಾವಣಗೆರೆ: ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಮನೆಯ ಆರು ಸದಸ್ಯರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.‌

ಮುನೀರ್ ಸಾಬ್ (65), ಸುಲ್ತಾನ್ (18), ಅಲ್ತಾಫ್ (15), ತಮನ್ನಾ (14), ಶಬೀನಾ ಬಾನು (34), ಫರೀದಾ ಬಾನು ( 58) ಗಾಯಗೊಂಡವರು. ಇವರಲ್ಲಿ ಮನೆಯ ಹಿರಿಯರಾದ ಮುನೀರ್ ಸಾಬ್​ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿದೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆಯಲ್ಲಿ ಸಿಲಿಂಡರ್​​​ ಸ್ಫೋಟ (ETV Bharat)

ನಿತ್ಯದಂತೆ ಇಂದು ಬೆಳಗ್ಗೆ ಎದ್ದು ಅಡುಗೆ ಮಾಡಲು ಗ್ಯಾಸ್ ಹಚ್ಚುವಾಗ ಸಿಲಿಂಡರ್​ ಸ್ಫೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಗಿದ್ದು, ಮೇಲ್ಭಾವಣಿಗೆ ಹಾಕಿದ್ದ ಶೀಟ್​ಗಳು ಹಾರಿಹೋಗಿವೆ.‌ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ದೇವರ ಗೂಳಿಯನ್ನೂ ಬಿಡದ ಕಳ್ಳರು; ರಾತ್ರಿ ವೇಳೆ ದುಷ್ಕೃತ್ಯ - Bull Theft

Last Updated : Oct 4, 2024, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.