ETV Bharat / state

ಕ್ಲೀನರ್​ ಎದೆ ಸೀಳಿದ್ದ 98 ಸೆಂಮೀ ಉದ್ದದ ಪೈಪ್‌ ಹೊರತೆಗೆದ ಕೆಎಂಸಿಆರ್‌ಐ ವೈದ್ಯರು - Successful Operation - SUCCESSFUL OPERATION

ಅ.2ರಂದು ನಡೆದ ಲಾರಿ ಅಪಘಾತದಲ್ಲಿ ಕಬ್ಬಿಣದ ಪೈಪ್​ ಒಂದು ಲಾರಿ ಕ್ಲೀನರ್​ ದಯಾನಂದ ಶಂಕರಬಡಗಿ ಎನ್ನುವವರ ಎದೆ ಸೀಳಿ ಹೊರಬಂದಿತ್ತು. ಇದೀಗ ವೈದ್ಯರು ಯಶಸ್ವಿ ಚಿಕಿತ್ಸೆ ಮೂಲಕ ಪೈಪ್​ ಹೊರತಗೆದಿದ್ದಾರೆ.

iron pipe stuck in chest of lorry cleaner
ಕ್ಲೀನರ್​ ಎದೆ ಸೀಳಿದ್ದ 98 ಸೆಂ.ಮೀ. ಉದ್ದದ ಪೈಪ್‌ (ETV Bharat)
author img

By ETV Bharat Karnataka Team

Published : Oct 4, 2024, 1:53 PM IST

Updated : Oct 4, 2024, 3:34 PM IST

ಹುಬ್ಬಳ್ಳಿ: ಅಪಘಾತದಲ್ಲಿ ಲಾರಿ ಕ್ಲೀನರ್ ಎದೆ ಸೀಳಿದ್ದ 98 ಸೆಂ.ಮೀ. ಉದ್ದದ ಪೈಪ್ ಹೊರ ತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ.

ರಾಣೆಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅ. 2ರಂದು ಬೆಳಗ್ಗೆ 4 ಗಂಟೆಗೆ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್​ ರಸ್ತೆಗೆ ಬಿದ್ದಿತ್ತು. ಪರಿಣಾಮ ಸರ್ವಿಸ್​ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್​ ಕ್ಲೀನರ್ ಶಿರಸಿಯ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ (27) ಅವರ ಎದೆ ಸೀಳಿ ಹೊರ ಬಂದಿತ್ತು. ಬಳಿಕ ಗಾಯಾಳುವನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ತಜ್ಞ ವೈದ್ಯರಿಲ್ಲವೆಂದು ಹುಬ್ಬಳ್ಳಿಯ ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು.

ಆಪರೇಶನ್​ ಬಗ್ಗೆ ವೈದ್ಯರ ಮಾತು (ETV Bharat)

ಯಶಸ್ವಿ ಶಸ್ತ್ರ ಚಿಕಿತ್ಸೆ: ಘಟಕದ ಮುಖ್ಯಸ್ಥ ಡಾ.ನಾಗರಾಜ ಚಾಂದಿ ಅವರು ಅಪಾಯವರಿತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೂ ಮೊದಲು ವಿಕಿರಣಶಾಸ್ತ್ರ ವಿಭಾಗದಲ್ಲಿ ಅಲ್ಟ್ರಾಸೌಂಡ್‌ ತಪಾಸಣೆ ನಡೆಸಿ ಹೃದಯ ಹಾಗೂ ಪ್ರಮುಖ ರಕ್ತನಾಗಳಿಗೆ ಯಾವುದೇ ಹಾನಿಯಾಗಿಲ್ಲವೆಂದು ಡಾ.ವೀಣಾ ಮರಡಿ ಅವರು ಖಚಿತಪಡಿಸಿಕೊಂಡಿದ್ದರು. ಈ ಆಧಾರದಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಸಿ ಯುನಿಟ್ ಮುಖ್ಯಸ್ಥ ಡಾ.ರಮೇಶ ಹೊಸಮನಿ, ವಿವಿಧ ವಿಭಾಗದ ಡಾ.ವಿಜಯ ಕಾಮತ್, ಡಾ.ವಿನಾಯಕ ಬ್ಯಾಟೆಪ್ಪನವರ, ಡಾ.ವಸಂತ ತೆಗ್ಗಿನಮನಿ, ಹೃದ್ರೋಗ ಶಸ್ತ್ರಚಿಕಿತ್ಸಕ ಡಾ.ಕೋಬಣ್ಣ ಕಟ್ಟಿಮನಿ, ಡಾ.ಧರ್ಮೇಶ ಲದ್ದಡ ನೇತೃತ್ವದ ವೈದ್ಯಕೀಯ ತಂಡ ಮಧ್ಯಾಹ್ನ 2ರಿಂದ 4.30ರವರೆಗೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ನಡೆಸಿದೆ.

ಕಿಮ್ಸ್​​​​ ನಿರ್ದೇಶಕರು ವಿವರಿಸಿದ್ದು ಹೀಗೆ: "ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶ ಹಾನಿಯಾಗಿತ್ತು. ಎದೆ ಹಿಂಭಾಗದಿಂದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಕೊಂಡಿಯೂ ಇತ್ತು. ಹೃದಯದ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹು ಎಚ್ಚರಿಕೆಯಿಂದ ನಿಭಾಯಿಸಿ 98 ಸೆಂ.ಮೀ. ಪೈಪ್‌ ಎದೆಯಿಂದ ಹೊರ ತೆಗೆಯಲಾಗಿದೆ" ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅವರು ತಿಳಿಸಿದರು.

ದಯಾನಂದ ಆರೋಗ್ಯದಲ್ಲಿ ಚೇತರಿಕೆ: ರಮೇಶ ಹೊಸಮನಿ ಮಾತನಾಡಿ, "ದಯಾನಂದ ಶಂಕರಬಡಗಿ ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನ ತೀವ್ರ ನಿಗಾ ಘಟಕದಲ್ಲಿ ಇರಲಿದ್ದಾರೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ತದನಂತರ ಡಿಸ್ಟಾರ್ಜ್ ಮಾಡಲಾಗುವುದು" ಎಂದರು.

ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ಹಾಗೂ ಪ್ರಾಚಾರ್ಯ ಡಾ.ಗುರುಶಾಂತಪ್ಪ ಯಲಗಚ್ಚಿನ ಮಾತನಾಡಿ, "ಆರಂಭದಲ್ಲಿ ನೋಡಿದ ವ್ಯಕ್ತಿಗೂ ಈಗ ನೋಡುವುದಕ್ಕೂ ವ್ಯತ್ಯಾಸವಾಗಿದೆ. ಶುಲ್ಕ ರಹಿತ ಚಿಕಿತ್ಸೆ ನೀಡಲಾಗಿದೆ. 7 ಬಾಟಲ್ ರಕ್ತ ನೀಡಲಾಗಿದೆ. ರಜೆ ದಿನವೂ ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಅದೂ ಕ್ಲಿಷ್ಟಕರವಾದದ್ದು ಎಂಬುದು ಗಮನಾರ್ಹವಾಗಿದೆ" ಎಂದರು.

ಗಾಯಾಳು ಸಹೋದರ ಹಾಗೂ ಚಾಲಕ ಶಿವಾನಂದ ಮಾತನಾಡಿ, "ಹೇಗೆ ಅಪಘಾತವಾಯಿತು ಎಂಬುದು ನನಗೂ ಗೊತ್ತಾಗಿಲ್ಲ. ಬೆಳಗ್ಗಿನ ವಾವ ಘಟನೆ ನಡೆದಿದೆ. ನನ್ನ ಸಹೋದರನ ಎದಗೆ ಕಬ್ಬಿಣದ ರಾಡು ಹೊಕ್ಕಿತ್ತು. ಆದರೂ ನನ್ನ ತಮ್ಮ ಮಾತನಾಡುತ್ತಿದ್ದ. ಸ್ಥಳಿಯರು, ಅಗ್ನಿಶಾಮಕ ಹಾಗೂ ಪೊಲೀಸರ ನೆರವಿನಿಂದ ದಾವಣಗೆರೆ ಆಸ್ಪತ್ರೆಗೆ ಕರೆದಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಅಪರೇಷನ್ ಸಾಧ್ಯವಿಲ್ಲ ಅಂದಾಗ ಕಿಮ್ಸ್​ಗೆ ಕರೆದುಕೊಂಡು ಬರಲಾಯಿತು. ಇಲ್ಲಿ‌ ವೈದ್ಯರು ಚೆನ್ನಾಗಿ ನೋಡಿಕೊಂಡು ನನ್ನ ತಮ್ಮನಿಗೆ ಮರುಜೀವಕೊಟ್ಟಿದ್ದಾರೆ. ನನ್ನ ತಮ್ಮ ಹುಷಾರಾಗಿ ಬರುತ್ತಾನೆ ಎಂದು ಅಂದುಕೊಂಡಿದ್ದೆ, ಹಾಗೇ ಆಗಿದೆ. ವೈದ್ಯರ ತಂಡಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ" ‌ಎಂದರು.

ಇದನ್ನೂ ಓದಿ: ರಾಣೆಬೆನ್ನೂರು ಬಳಿ ಅಪಘಾತ: ​ಲಾರಿ ಚಾಲಕನ ಎದೆಗೆ ಹೊಕ್ಕ ಕಬ್ಬಿಣದ ಪೈಪ್ - Iron Pipe Enters Chest

Last Updated : Oct 4, 2024, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.