ಕಲಬುರಗಿ: ಜಿಲ್ಲೆಯಲ್ಲಿ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದೆ. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ 35 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅಪಾಯದ ಮಟ್ಟ ಮೀರಿ ಕಾಗಿಣಾ ನದಿ ಹರಿಯುತ್ತಿದ್ದು, ಮಳಖೇಡ ಬಳಿಯಿರುವ ಬೃಹತ್ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕಲಬುರಗಿ-ಸೇಡಂ-ಮೆಹಬೂಬನಗರ-ಹೈದ್ ಬಾದ್ ರಸ್ತೆ ಸಂಪರ್ಕ ಕಡಿತವಾಗಿದೆ.
ಆಳಂದ ತಾಲೂಕಿನ ಭೂಸನೂರು ಗ್ರಾಮಕ್ಕೆ ಜಲದಿಗ್ಭಂದನ ಎದುರಾಗಿದ್ದು, ಇಡೀ ಗ್ರಾಮದ ಸುತ್ತ ನೀರು ನದಿಯಂತೆ ಸುತ್ತುವರಿದಿದೆ.ಇತ್ತ ಸೊನ್ನ ಬ್ಯಾರೇಜ್‌ನಿಂದ 6 ಕ್ರಸ್ಟ್ ಗೇಟ್‌ಗಳ ಮೂಲಕ ಭೀಮಾ ನದಿಗೆ ನೀರು ಬಿಟ್ಟಿರುವ ಪರಿಣಾಮ ಭೀಮಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ.