ETV Bharat / state

ಗುತ್ತೇದಾರ್​​ ಸಹೋದರರ ಮಧ್ಯೆ ಬಿಜೆಪಿ ಟಿಕೆಟ್ ಕದನ: ಈ ಬಾರಿ ಕ್ಷೇತ್ರ ಬಿಟ್ಟು ಕೊಡಲಿ ಎಂದ ನಿತಿನ್ - ವಿಧಾನಸಭಾ ಚುನಾವಣೆ

ಅಫಜಲಪುರ ವಿಧಾನಸಭಾ ಕ್ಷೇತ್ರ - ಗುತ್ತೇದಾರ್​ ಸಹೋದರರ ನಡುವೆ ಟಿಕೆಟ್​ಗೆ ಪೈಪೋಟಿ - ಈ ಬಾರಿ ಕ್ಷೇತ್ರ ಬಿಟ್ಟು ಕೊಡಲಿ ಎಂದ ನಿತಿನ್​ ಗುತ್ತೇದಾರ್​​

fight-between-guttedar-brothers-for-bjp-ticket-in-afzalpur-constituency
ಗುತ್ತೇದಾರ್​​ ಸಹೋದರರ ಮಧ್ಯೆ ಬಿಜೆಪಿ ಟಿಕೆಟ್ ಕದನ: ಈ ಬಾರಿ ಕ್ಷೇತ್ರ ಬಿಟ್ಟು ಕೊಡಲಿ ಎಂದ ನಿತಿನ್
author img

By

Published : Mar 9, 2023, 10:15 PM IST

ಗುತ್ತೇದಾರ್​​ ಸಹೋದರರ ಮಧ್ಯೆ ಬಿಜೆಪಿ ಟಿಕೆಟ್ ಕದನ: ಈ ಬಾರಿ ಕ್ಷೇತ್ರ ಬಿಟ್ಟು ಕೊಡಲಿ ಎಂದ ನಿತಿನ್

ಕಲಬುರಗಿ : ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಗುತ್ತೇದಾರ್ ಸಹೋದರರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಶತಾಯ ಗತಾಯ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮತ್ತು ನಿತಿನ್ ಗುತ್ತೇದಾರ್ ಸಹೋದರರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ನಿತಿನ್ ಗುತ್ತೇದಾರ್​, ಕಳೆದ ಚುನಾವಣೆಯಲ್ಲಿ ಮಾಲಿಕಯ್ಯ ಗುತ್ತೇದಾರ ನೀಡಿದ ಭರವಸೆಯಂತೆ ಈ ಬಾರಿ ಕ್ಷೇತ್ರ ನನಗೆ ಬಿಟ್ಟು ಕೊಡಲಿ ಎಂದು ಅಣ್ಣನಿಗೆ ಹೇಳಿದ್ದಾರೆ.

ಮಾಜಿ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ‌ಅಫಜಲಪುರ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಗುತ್ತೇದಾರ್ ಸಹೋದರರು ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದರು. ಅಣ್ಣ ಮಾಲೀಕಯ್ಯಗೆ ಸೆಡ್ಡು ಹೊಡೆದು ನಿತೀನ್ ಗುತ್ತೇದಾರ್ ಪ್ರತ್ಯೇಕವಾಗಿ ಸ್ವಾಗತ ಬ್ಯಾನರ್ ಗಳನ್ನು ಹಾಕಿದ್ದರು. ಅಣ್ಣ ಮಾಲೀಕಯ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರೂ ಕೂಡ ಬ್ಯಾನರ್​ಗಳಲ್ಲಿ ಫೋಟೋ ಹಾಕಿರಲಿಲ್ಲ. ಬಿಜೆಪಿ ಟಿಕೆಟ್​ಗಾಗಿ ಇಬ್ಬರು ಸಹೋದರರ ಮಧ್ಯೆ ಪೈಪೋಟಿ ಏರ್ಪಟ್ಟಿರುವುದು ಬಹಿರಂಗವಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿತಿನ್ ಗುತ್ತೇದಾರ್​, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಅಫಜಲಪುರ ಮತ ಕ್ಷೇತ್ರದಿಂದ ಬಿಜೆಪಿ ಅಭ್ಯಥಿ೯ಯಾಗಿ ಸ್ಪರ್ಧೆ ಮಾಡುವುದು ಖಚಿತ. ಕುಟುಂಬದ ಹಿರಿಯರು, ಕ್ಷೇತ್ರದ ಹಿರಿಯರು, ಯುವಕರು, ಮತದಾರರು ಹಾಗೂ ಸಮಾನ ಮನಸ್ಥಿತಿಯ ಹಿತ ಚಿಂತಕರ ಒತ್ತಾಯದ ಮೇರೆಗೆ ಮಹತ್ವದ ಸಭೆಯೊಂದನ್ನು ನಡೆಸಿ ಒಕ್ಕೊರಲಿನಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 15 ವಷ೯ಗಳಿಂದ ನಾನು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಸದ್ಯ ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿಯನ್ನು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು 50 ವರ್ಷಕ್ಕೆ ಇಳಿಯಬಹುದು. ಈಗಾಗಲೇ ನನಗೆ 40 ವರ್ಷ ವಯಸ್ಸಾಗಿದೆ. ಆಡಳಿತ, ಜನ ಸೇವೆಯಲ್ಲಿ ಸಾಕಷ್ಟು ಅನುಭವ ಇದೆ ಎಂದು ಹೇಳಿದರು.

ಕಳೆದ ಚುನಾವಣೆ ವೇಳೆ ಅಣ್ಣ ಮಾಲಿಕಯ್ಯ ಗುತ್ತೇದಾರ್​ ಮುಂದಿನ ಚುನಾವಣೆಯಲ್ಲಿ ನನ್ನನ್ನು ಕಣಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟಿರುವ ಮಾತು ತಪ್ಪಿ ತಾವೇ ಸ್ಪರ್ಧಿಸಲು ಮುಂದಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ವರಿಷ್ಠರು ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ. ಸಮಿಕ್ಷೆ ಕೂಡಾ ನನ್ನ ಪರವಾಗಿದೆ. ಟಿಕೆಟ್ ಸಿಗದಿದ್ದರೆ ಬೆಂಬಲಿಗರೊಂದಿಗೆ ಚರ್ಚಿಸಿ‌ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಹೇಳಿದರು.

ಗುತ್ತೇದಾರ ಕುಟುಂಬದ ಹಿರಿಯ ಸಹೋದರ ಸತೀಶ್ ಗುತ್ತೇದಾರ್ ಕೂಡಾ ನಿತಿನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅಫಜಲಪುರ ಕ್ಷೇತ್ರದ ಹಿರಿಯರು, ಯುವ ಜನತೆ ಹಾಗೂ ಮತದಾರರು ನಿತಿನ್ ಗುತ್ತೇದಾರ ಪರ ಒಲವು ಹೊಂದಿದ್ದು, ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ತಪ್ಪಿದ್ದೆ ಆದಲ್ಲಿ, ಹಿರಿಯರ ಜೊತೆ ಸಮಾಲೋಚನೆ ಮಾಡಿ ಮುಂದಿನ ತೀಮಾ೯ನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಸದ್ಯ ಅಫಜಲಪುರ ಕ್ಷೇತ್ರದ ಅಭ್ಯರ್ಥಿಯಾಗಲು ಗುತ್ತೇದಾರ ಸಹೋದರ ನಡುವೆ ಪೈಪೋಟಿ ಏರ್ಪಟ್ಟಿದ್ದು,ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ ಎಂದು ಕಾದು ನೋಡಬೇಕು.

ಇದನ್ನೂ ಓದಿ : ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ಪ್ರಾರಂಭದಲ್ಲೇ ವಿರೋಧ: ರಾಜಾಜಿನಗರ ಟಿಕೆಟ್ ಆಕಾಂಕ್ಷಿ ಮನೋಹರ್ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.