ETV Bharat / state

ಕಲಬುರಗಿ: 44 ಅಕ್ರಮ ಶೆಡ್​ಗಳ ತೆರವು; ನಿವಾಸಿಗಳ ಆಕ್ರೋಶ - ಕಲಬುರಗಿ ಮಹಾನಗರ ಪಾಲಿಕೆ

ದಶಕದಿಂದ ಸುಮ್ಮನಿದ್ದವರು ಏಕಾಏಕಿ ಶೆಡ್​ ಖಾಲಿ ಮಾಡಿ ಅಂದ್ರೆ ನಾವು ಎಲ್ಲಿಗೆ ಹೋಗಬೇಕು? ಕನಿಷ್ಠ ನಮಗೆ ನೊಟೀಸ್​ ಕೂಡಾ ನೀಡಿಲ್ಲ ಎಂದು ಕಲಬುರಗಿ ಜಿಡಿಎ ಕಾಲೊನಿಯ ನಿವಾಸಿಗಳು ಅಧಿಕಾರಿಗಳೆದುರು ಗೋಳಾಡಿದರು.

44 ಅಕ್ರಮ ಶೆಡ್​ಗಳ ತೆರವು
ಕಲಬುರಗಿಯಲ್ಲಿ 44 ಅಕ್ರಮ ಮನೆಗಳ ತೆರವು
author img

By ETV Bharat Karnataka Team

Published : Oct 12, 2023, 7:49 PM IST

Updated : Oct 12, 2023, 10:59 PM IST

44 ಅಕ್ರಮ ಶೆಡ್​ಗಳ ತೆರವು

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಇಂದು ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಪಾಲಿಕೆ ವ್ಯಾಪ್ತಿಗೆ ಸೇರಿದ ಜಿಡಿಎ ಆಶ್ರಯ ಕಾಲೊನಿಯ ಸರ್ವೆ ನಂಬರ್ 9/3 ವಾರ್ಡ್ ನಂ.23ರಲ್ಲಿ ಹಲವು ವರ್ಷಗಳಿಂದ ಸುಮಾರು 44ಕ್ಕೂ ಅಧಿಕ ಕುಟುಂಬಗಳು ವಾಸವಿದ್ದವು. ಆದರೆ ಸೂರಿಲ್ಲದೇ ಖಾಲಿಯಿದ್ದ ಜಾಗದಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು, ನಿನ್ನೆ ಮಕ್ಕಳೊಂದಿಗೆ ರಾತ್ರಿ ಊಟ ಮಾಡಿ ಮಲಗಿದ್ದರು. ಆದ್ರೆ ಇಂದು ಬೆಳಗ್ಗೆ ಮನೆ ಮುಂದೆ ಜೆಸಿಬಿ ಘರ್ಜಿಸಲು ಶುರು ಮಾಡಿದ್ದು ಶೆಡ್​ಗಳನ್ನು ನೆಲಸಮ ಮಾಡಲಾಗಿದೆ. ಆಪರೇಷನ್ ಡೆಮಾಲಿಷ್‌ಗೆ ಸೂರು ಕಳೆದುಕೊಂಡವರ ಬದುಕು ಬೀದಿಗೆ ಬಂದಿದ್ದು ಅಧಿಕಾರಿಗಳೆದುರು ಅಳಲು ತೋಡಿಕೊಂಡರು.

ಅಕ್ರಮವಾಗಿ ಸೂರು ಮಾಡಿಕೊಂಡಿದ್ದ ಬಡ ಕುಟುಂಬಗಳು ಹಕ್ಕು ಪತ್ರ ನೀಡುವಂತೆ ಸಂಸದ ಉಮೇಶ್ ಜಾಧವ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. "ಒಂದೊತ್ತಿನ ತುತ್ತಿಗಾಗಿ ಪರದಾಡಿ ಬೆಳಗ್ಗೆಯಿಂದ ದುಡಿದರೂ 50 ರಿಂದ 100 ರೂಪಾಯಿ‌ ಸಂಪಾದನೆ ಆಗುತ್ತದೆ. ದಿನದ ಸಂಪಾದನೆಯಿಂದಲೇ ಮಕ್ಕಳಿಗೆ ಊಟ, ಇಲ್ಲದಿದ್ದರೆ ಎಲ್ಲರೂ ಉಪವಾಸ ಇರುವಂತಹ ಪರಿಸ್ಥಿತಿ ಇದೆ. ನಾವು ಮಳೆ‌ ಬೀಸಿಲಿದ್ದರೂ ಇಲ್ಲೇ ವಾಸವಾಗಿದ್ದೇವೆ. ಆದ್ರೆ ಈಗ ದಿಢೀರ್ ಆಗಿ ಬಂದು ಮನೆ ಒಡೆದಿದ್ದಾರೆ" ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಇದನ್ನೂಓದಿ: ಉತ್ತರಕನ್ನಡದಲ್ಲಿ ನಡೆದ ಭೀಕರ ಭೂ ಕುಸಿತಕ್ಕೆ 2 ವರ್ಷ; ಜನರಿಗೆ ಇನ್ನೂ ಸಿಗದ ಪರಿಹಾರ

Last Updated : Oct 12, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.