ETV Bharat / state

ಕಲಬುರಗಿಯಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರ ಪ್ರತಿಭಟನೆ

ರಾಜ್ಯಾದ್ಯಂತ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಇತರ ವೈದ್ಯರು ಪ್ರತಿಭಟನೆ ನಡೆಸಿದ್ದು, ಕಲಬುರಗಿಯಲ್ಲಿಯೂ ಸಹ ಕಪ್ಪು ಪಟ್ಟಿ ಧರಿಸೊಕೊಂಡು ವೈದ್ಯರು ಪ್ರತಿಭಟನೆ ನಡೆಸಿದರು.

author img

By

Published : Nov 8, 2019, 2:32 PM IST

ಪ್ರತಿಭಟನಾ ನಿರತ ವೈದ್ಯರು

ಕಲಬುರಗಿ: ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್​​​ಗೆ ಕರೆ ನೀಡಿದ ಹಿನ್ನೆಲೆ ಕಲಬುರಗಿಯಲ್ಲಿ ಸಹ ಖಾಸಗಿ ಆಸ್ಪತ್ರೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟಿಸಿದ ವೈದ್ಯರು, ಡಾಕ್ಟರ್ಸ್​​​ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲಲ್ಲ ಈ ಹಿಂದೆ ಕೊಡ ಬಹಳಷ್ಟು ಪ್ರಕರಣ ನಡೆದಿವೆ. ದೇಶಾದ್ಯಂತ ವೈದ್ಯರಿಗೆ ಯಾವುದೇ ರಕ್ಷಣೆ ಇಲ್ಲ. ರಕ್ಷಣೆ ಇಲ್ಲದೇ ವೈದ್ಯರು ಮುಕ್ತವಾಗಿ ಜನಸೇವೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಸರ್ಕಾರ, ವೈದ್ಯರ ರಕ್ಷಣೆ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ವೈದ್ಯರು

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಒಪಿಡಿ: ಜಿಲ್ಲೆಯಲ್ಲಿ ಡೆಂಘಿ, ಚಿಕೂನ್​​​​ ಗುನ್ಯಾ ರೋಗ ಹರಡಿರೋ ಹಿನ್ನೆಲೆಯಲ್ಲಿ ಒಪಿಡಿ ತೆರೆಯಲಾಗಿದೆ. ರೋಗಿಗಳ ಹಿತದೃಷ್ಟಿಯಿಂದ ರೋಗಿಗಳಿಗೆ ತೊಂದರೆಯಾಗಬಾರದೆಂದು ಒಪಿಡಿ ಸೇವೆಯನ್ನು ಎಂದಿನಂತೆ ಮುಂದುವರೆಸಲಾಗಿದೆ ಎಂದು ಐ.ಎಂ.ಎ ಜಿಲ್ಲಾಧ್ಯಕ್ಷ ಅಮುಲ್ ಪತಂಗೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.