ETV Bharat / state

ಶಹಾಬಾದ್​ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಆಗ್ರಹ - ಕಲಬುರಗಿ

ಕೋವಿಡ್​ ರೋಗಿಗಳ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶಹಾಬಾದ್​ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Shahabad Community Health Center
ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಆಗ್ರಹ
author img

By

Published : May 7, 2021, 10:56 AM IST

ಕಲಬುರಗಿ: ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ತಪ್ಪಿಸಲು ಶಹಾಬಾದ್​ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಶಹಾಬಾದ್​ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಆಗ್ರಹ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳಿಗೆ ಬೆಡ್, ಆಕ್ಸಿಜನ್ ‌ಸಿಗದೆ ಸಾವನಪ್ಪುತ್ತಿರುವುದು ಸಾಮಾನ್ಯವಾಗಿದೆ. ಹಾಗಾಗಿ ರೋಗಿಗಳ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶಹಾಬಾದ್​ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಶಹಾಬಾದ್​ ತಾಲೂಕಿನಲ್ಲಿ 1 ಲಕ್ಷ ಜನ ಸಂಖ್ಯೆ ಇದೆ. ಇಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ 24 ಆಕ್ಸಿಜನ್ ಸಿಲಿಂಡರ್​ ಬಳಸಲು ವ್ಯವಸ್ಥೆಯಿದ್ದರೂ ಕೇವಲ 2 ಸಿಲಿಂಡರ್​ಗಳನ್ನು ಮಾತ್ರ ಬಳಸಲಾಗುತ್ತಿದೆ. ನಗರದಲ್ಲಿ ದಿನೇ ದಿನೇ ಸೋಂಕು ಹೆಚ್ಚುತ್ತಿರುವುದರಿಂದ ನಗರದ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಬೇಕು. ಇದರಿಂದ ಶಹಾಬಾದ್​ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ಜಿಲ್ಲಾಸ್ಪತ್ರೆಯ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ.

ಆರೋಗ್ಯ ಕೇಂದ್ರದಲ್ಲಿ 30 ಬೆಡ್​ಗಳಿದ್ದು, 15ರಿಂದ 20 ಬೆಡ್​ಗಳನ್ನು ಕೊರೊನಾ ಕೇಂದ್ರಕ್ಕೆ ಬಳಸಬಹುದು. ಜಿಲ್ಲಾಡಳಿತ ಆಸ್ಪತ್ರೆಗೆ ಓರ್ವ ಫಿಜಿಷಿಯನ್, ಓರ್ವ ವೈದ್ಯರನ್ನು ನಿಯೋಜಿಸಿ ರೆಮ್​ಡಿಸಿವರ್, ಆಕ್ಸಿಜನ್ ವ್ಯವಸ್ಥೆ ಮಾಡಬೇಕು‌ ಎಂದು ಒತ್ತಾಯಿಸಿದರು.

ಮುಂದಿನ 24 ಗಂಟೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸದಿದ್ದರೆ ಶಹಾಬಾದ್​ ನಗರವನ್ನು ಬಂದ್ ಮಾಡಿ ಆಸ್ಪತ್ರೆಯ ಎದುರು ಲಾಕ್​​ಡೌನ್​​ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

24 ಸಿಲಿಂಡರ್​ ವ್ಯವಸ್ಥೆ:

ಈಗಾಗಲೇ ತಾಲೂಕು ಆಡಳಿತದ ಸಹಯೋಗದೊಂದಿಗೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್​ ಕಂಬಾನೂರ ನೇತೃತ್ವದಲ್ಲಿ ಯುವಕರು ಇಲ್ಲಿಯ ಜೆಪಿ ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ಚರ್ಚೆ ನಡೆಸಿ 24 ಸಿಲಿಂಡರ್​ ವ್ಯವಸ್ಥೆ ಮಾಡಿದ್ದಾರೆ. ಆದರಿಂದ ಶಹಾಬಾದ್​ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದರಿಂದ ಈ ಭಾಗದ ಜನರಿಗೆ ಸಹಕಾರವಾಗಲಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.