ETV Bharat / state

ಕಂಟೈನ್​ಮೆಂಟ್​ ಝೋನ್​​ ಪ್ರದೇಶಕ್ಕೆ ಭೇಟಿ: ಕಾರಜೋಳ-ಕೈ​ ನಾಯಕನ ನಡುವೆ ಮಾತಿನ ಚಕಮಕಿ - ಮೋಮಿನಪುರ

ಕಲಬುರಗಿ ನಗರದಲ್ಲಿ ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಿರುವ ಮೋಮಿನಪುರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡುವ ಮಾರ್ಗ ಮಧ್ಯದಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕ ಹಾಗೂ ಡಿಸಿಎಂ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾರಜೋಳ
Govindha Karajola
author img

By

Published : May 2, 2020, 8:00 PM IST

ಕಲಬುರಗಿ: ಕಂಟೈನ್​ಮೆಂಟ್​ ಝೋನ್​ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸ್ಥಳೀಯ ಕಾಂಗ್ರೆಸ್​ ನಾಯಕನ ನಡುವೆ ಮಾತಿನ ಚಕಮಕಿ ನಡೆದಿದೆ.‌

ಕಾರಜೋಳ ಮತ್ತು ಕೈ​ ನಾಯಕನ ನಡುವೆ ಮಾತಿನ ಚಕಮಕಿ

ಕಲಬುರಗಿ ನಗರದಲ್ಲಿ ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಿರುವ ಮೋಮಿನಪುರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಲು ಹೊರಟಾಗ ಮಾರ್ಗ ಮಧ್ಯೆ ಮುಸ್ಲಿಂ ಚೌಕ್​ನಲ್ಲಿ ಡಿಸಿಎಂ ಅವರನ್ನು ಸ್ವಾಗತಿಸಲು ಹಾಗೂ ಚರ್ಚೆಗೆ ಅವಕಾಶ ಸಿಗಲೆಂದು ಟೆಂಟ್ ಹಾಕಲಾಗಿತ್ತು. ಅಲ್ಲಿ ಇಳಿದ ಕಾರಜೋಳಗೆ ಸ್ವಾಗತ ಕೋರಿದ ಜನರಿಗೆ ಹೇಗಿದ್ದೀರಿ ಎಂದು ಪ್ರಶ್ನಿಸಿದಾಗ, ಕಾಂಗ್ರೆಸ್ ನಾಯಕ ಮಜರ್ ಆಲಂ ನಾವು ಇನ್ನೂ ಬದುಕಿದ್ದೇವೆ. ಎಷ್ಟು ಬೇಗ ನಮ್ಮ ಏರಿಯಾಗೆ ಬಂದು ಕಾಳಜಿ ತೋರಿಸಿದ್ದೀರಿ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಇದರಿಂದ ಕುಪಿತಗೊಂಡ ಕಾರಜೋಳ ಅಲ್ಲಿಂದ ವಾಪಸ್​ ಆಗಿದ್ದಾರೆ.

ಇದೇ ವೇಳೆ ಶಾಸಕಿ ಖನೀಸ ಫಾತಿಮಾ ಡಿಸಿಎಂ ಮನವೊಲಿಕೆಗೆ ಯತ್ನಿಸಿದರಾದರೂ ಕಾರಜೋಳ ಸಿಟ್ಟಿನಿಂದಲೇ ಕಾರು ಹತ್ತಿ ಹೊರಟು ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.