ETV Bharat / state

ಹಬ್ಬಕ್ಕೆ ಕರೆಯಲು ಬಂದ ಅಪ್ಪನೊಂದಿಗೆ ಸ್ಕೂಟರ್​ ಏರಿದ ಮಗಳು ಮಸಣಕ್ಕೆ! ಡಿಕ್ಕಿ ಹೊಡೆದ ಬಸ್​ನಲ್ಲಿದ್ದ ತಾಯಿ - ಕಲಬುರಗಿ ಅಪಘಾತ ಸುದ್ದಿ

ಸಾರಿಗೆ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ಘಟನೆ ಆಳಂದ ತಾಲೂಕಿನ ಝಳಕಿ ಬಳಿ ನಡೆದಿದೆ.

ಪ್ರೀತಿ ಜಮಾದಾರ್ ಮೃತ ವಿದ್ಯಾರ್ಥಿನಿ
author img

By

Published : Oct 29, 2019, 2:22 PM IST

ಕಲಬುರಗಿ: ಹಬ್ಬಕ್ಕೆ ಕರೆಯಲು ಬಂದಿದ್ದ ಅಪ್ಪನೊಂದಿಗೆ ಬೈಕ್ ಮೇಲೆ ಹೊರಟಾಗ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ಘಟನೆ ಆಳಂದ ತಾಲೂಕಿನ ಝಳಕಿ ಬಳಿ ನಡೆದಿದೆ.

ಸಾರಿಗೆ ಬಸ್ ಡಿಕ್ಕಿ: ವಿದ್ಯಾರ್ಥಿನಿ ಸಾವು

ಮದಗುಣಕಿ ಗ್ರಾಮದ ಪ್ರೀತಿ ಜಮಾದಾರ್ (12) ಮೃತಳು. ತಂದೆ-ತಾಯಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮದಗುಣಕಿ ಗ್ರಾಮದಲ್ಲಿರುವ ಅಜ್ಜಿಯ ಮನೆಯಲ್ಲಿ ಪ್ರೀತಿ ಶಾಲೆಗೆಂದು ಇದ್ದಳು. ಹಬ್ಬಕ್ಕೆ ಕರೆಯಲೆಂದು ತಂದೆ-ತಾಯಿ ಗ್ರಾಮಕ್ಕೆ ಬಂದಿದ್ದರು. ತಾಯಿಯನ್ನು ಬಸ್​ನಲ್ಲಿ ಬರಲು ಹೇಳಿ ತಂದೆ ಹಾಗೂ ಮಗಳು ಕಲಬುರಗಿವರೆಗೆ ಬೈಕ್​ನಲ್ಲಿ ತೆರಳುವಾಗ ಆಳಂದ ಡಿಪೋಗೆ ಸೇರಿದ ಸೋಲಾಪೂರ ಕಲಬುರಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಸ್​ನಲ್ಲಿಯೇ ಮೃತ ಬಾಲಕಿಯ ತಾಯಿ ಪ್ರಯಾಣಿಸುತ್ತಿದ್ದಳು. ತಂದೆಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ‌. ಮಗಳ ಸಾವು ಕಣ್ಣಾರೆ ಕಂಡ ಪೊಷಕರ ಅಂಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಂತರ ಸ್ಥಳದಲ್ಲಿಯೇ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಹಬ್ಬಕ್ಕೆ ಕರೆಯಲು ಬಂದಿದ್ದ ಅಪ್ಪನೊಂದಿಗೆ ಬೈಕ್ ಮೇಲೆ ಹೊರಟಾಗ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ಘಟನೆ ಆಳಂದ ತಾಲೂಕಿನ ಝಳಕಿ ಬಳಿ ನಡೆದಿದೆ.Body:ಮದಗುಣಕಿ ಗ್ರಾಮದ ಪ್ರೀತಿ ಜಮಾದಾರ್ (12) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತಂದೆ-ತಾಯಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮದಗುಣಕಿ ಗ್ರಾಮದಲ್ಲಿರುವ ಅಜ್ಜಿಯ ಮನೆಯಲ್ಲಿ ಪ್ರೀತಿ ಶಾಲೆಗೆಂದು ಇದ್ದಳು. ಹಬ್ಬಕ್ಕೆ ಕರೆಯಲೆಂದು ತಂದೆ-ತಾಯಿ ಗ್ರಾಮಕ್ಕೆ ಬಂದಿದ್ದರು. ತಾಯಿಯನ್ನು ಬಸ್ ನಲ್ಲಿ ಬರಲು ಹೇಳಿ ತಂದೆ ಹಾಗೂ ಮಗಳು ಕಲಬುರಗಿವರೆಗೆ ಬೈಕ್ ನಲ್ಲಿ ತೆರಳುವಾಗ ಯಮನಾಗಿ ಬಂದ ಆಳಂದ ಡಿಪೋಗೆ ಸೇರಿದ ಸೋಲಾಪೂರ ಕಲಬುರಗಿ ಬಸ್ ಡಿಕ್ಕಿ ಹೊಡೆದಿದೆ. ದುರಂತ ಎಂದರೆ ಡಿಕ್ಕಿ ಹೊಡೆದ ಬಸ್ ನಲ್ಲಿಯೇ ಮೃತ ಬಾಲಕಿಯ ತಾಯಿ ಪ್ರಯಾಣಿಸುತ್ತಿದ್ದಳು. ತಂದೆಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ‌. ಮಗಳ ಸಾವು ಕಣ್ಣಾರೆ ಕಂಡ ಪೊಷಕರ ಅಂಕ್ರಂದನ ಹೇಳತಿರದಂತಿತ್ತು. Conclusion:ಇನ್ನು ಘಟನೆ ನಂತರ ಸ್ಥಳದಲ್ಲಿಯೇ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.