ಕಲಬುರಗಿ: ಬೆಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಹಿನ್ನೆಲೆ ಈ ಹಿಂದೆ ವಿನಾಯಿತಿ ಕೊಡಲಾಗಿತ್ತು. ಈಗ ಮಳೆಗಾಲವಾದ್ದರಿಂದ ಬಿಸಿಲಿನ ತಾಪ ಇಳಿಕೆಯಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡಬೇಕು ಎಂದು ಹೇಳಿದ್ದಾರೆ.