ಕಲಬುರಗಿ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಿಂದು ಶಿಲಾನ್ಯಾಸ ನೆರವೇರಿದೆ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಲಿರುವ 9 ಕೆ.ಜಿ ಬೆಳ್ಳಿ ಇಟ್ಟಿಗೆಗೆ ಕಲಬುರಗಿ ನಗರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀರಾಮನ ಪರಮಭಕ್ತ ರಾಜು ಭವಾನಿ ಎಂಬುವರು ಕೋಲ್ಕತ್ತಾ ಮೂಲದ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ 9 ಕೆ. ಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಮಾಡಿಸಿದ್ದಾರೆ. ಇದೇ ವಾರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮೂಲಕ ಅಯೋಧ್ಯೆಯ ಟ್ರಸ್ಟ್‌ಗೆ ಬೆಳ್ಳಿ ಇಟ್ಟಿಗೆಯನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.