ETV Bharat / state

ಕರ್ನಾಟಕ ಸೇರಲು ಉತ್ಸುಕವಾದ ಮಹಾರಾಷ್ಟ್ರದ 40 ಗ್ರಾಮಗಳು - ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ

ಮಹಾರಾಷ್ಟ್ರ ಸರ್ಕಾರ ಯಾವುದೇ ಅಗತ್ಯ ಮೂಲ ಸೌಲಭ್ಯ ಕೊಡುತ್ತಿಲ್ಲ ಎಂದು ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಸುಮಾರು 40 ಗ್ರಾಮಗಳ ಗ್ರಾಮಸ್ಥರು ಕರ್ನಾಟಕಕ್ಕೆ ಸೇರುವ ಉತ್ಸಾಹ ತೋರಿಸಿ ತಾವೇ ಹೋರಾಟಕ್ಕೆ ಇಳಿದಿರುವ ಘಟನೆ ನಡೆದಿದೆ.

Villagers of 40 villages are eager to join Karnataka
ಕರ್ನಾಟಕ ಸೇರಲು ಉತ್ಸುಕರಾದ ಮಹಾರಾಷ್ಟ್ರದ 40 ಗ್ರಾಮಗಳು
author img

By

Published : Nov 28, 2022, 10:43 AM IST

ಕಲಬುರಗಿ: ಬೆಳಗಾವಿ ಸೇರಿ ಕರ್ನಾಟಕದ ಕೆಲ ಭಾಗಗಳ ಮೇಲೆ ಕಣ್ಣಿಟ್ಟ ಮಹಾರಾಷ್ಟ್ರ ಆಗಾಗ ಗಡಿ ಕ್ಯಾತೆ ತೆಗೆದು ಕುಚ್ಚೇಷ್ಟೆ ಮುಂದುವರೆಸಿಕೊಂಡು ಬಂದಿದೆ. ಆದರೆ, ಕರ್ನಾಟಕ ಜನರ ಬಗ್ಗೆ ಚಿಂತೆ ಮಾಡೋದು ಬಿಡಿ ಮೊದಲು ಮಹಾರಾಷ್ಟ್ರದಲ್ಲಿರುವ ನಮ್ಮ ಬಗ್ಗೆ ಚಿಂತೆ ಮಾಡಿ ಎಂದು ಅಲ್ಲಿನ ಜನರು ಮಹಾರಾಷ್ಟ್ರ ಸರ್ಕಾರಕ್ಕೆ ಸರಿಯಾಗಿ ಚಾಟಿ ಏಟು ನೀಡಿದ್ದಾರೆ. ಜೊತೆಗೆ ಹಲವು ಗ್ರಾಮದ ಜನರು ಅಲ್ಲಿನ ಸರ್ಕಾರದ ಮೇಲೆ ಕೋಪಗೊಂಡು ಕರ್ನಾಟಕ ಸೇರಲು ಉತ್ಸಾಹ ತೋರಿಸಿದರು.

ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಸುಮಾರು 40 ಗ್ರಾಮಗಳ ಗ್ರಾಮಸ್ಥರು ಕರ್ನಾಟಕಕ್ಕೆ ಸೇರುವ ಉತ್ಸಾಹ ತೋರಿಸಿ ತಾವೇ ಹೋರಾಟಕ್ಕೆ ಇಳಿದಿದ್ದಾರೆ. ಮಹಾರಾಷ್ಟ್ರದಲ್ಲಿರುವ ನಮ್ಮ ಸಮಸ್ಯೆ ಬಗ್ಗೆ ಚಿಂತೆ ಮಾಡೋದು ಬಿಟ್ಟು ಬೆಳಗಾವಿ ಸೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಾ ಇದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ನಾವು ಅಭಿವೃದ್ದಿಯಲ್ಲಿ ತುಂಬಾನೇ ಹಿಂದುಳಿದಿದ್ದೇವೆ. ನಮಗೆ ಇಲ್ಲಿನ ಸರ್ಕಾರ ಯಾವುದೇ ಅಗತ್ಯ ಮೂಲ ಸೌಲಭ್ಯ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿಗೂ ಸರಿಯಾದ ರಸ್ತೆಗಳಿಲ್ಲ, ಜಮೀನುಗಳಿಗೆ ಉಚಿತ ವಿದ್ಯುತ್ ನೀಡುತ್ತಿಲ್ಲ. ಇಂತಹ ಹತ್ತಾರು ಸಮಸ್ಯೆಗಳಿವೆ. ನಮ್ಮನ್ನ ಕರ್ನಾಟಕಕ್ಕೆ ಬಿಟ್ಟುಕೊಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಜನರು ಆಗ್ರಹಿಸಿದ್ದು, ಮಹಾರಾಷ್ಟ್ರ ಸರ್ಕಾರಕ್ಕೂ ಮತ್ತು ಕರ್ನಾಟಕ ಸರ್ಕಾರಕ್ಕೂ ಪತ್ರ ಬರೆಯಲು ಮುಂದಾಗಿದ್ದಾರೆ‌.

ಇದನ್ನೂ ಓದಿ :ಜತ್ತ ತಾಲೂಕಿಗೆ ಕರ್ನಾಟಕ ಸಿಎಂ ಆದಷ್ಟು ಬೇಗನೆ ಭೇಟಿ ನೀಡಲಿ : ಮಹಾ ಕನ್ನಡಿಗರ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.