ಕಲಬುರಗಿ: ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾ ಮತ್ತೆ ತನ್ನ ಅಟ್ಟಹಾಸ ಮೆರೆದಿದೆ. ಜಿಲ್ಲೆಯಲ್ಲಿ ಇಂದು 27 ಜನರಿಗೆ ಸೋಂಕು ದೃಢಪಟ್ಟಿದೆ.
ಈ ಪೈಕಿ ಆರು ಮಕ್ಕಳು, ಐವರು ಮಹಿಳೆಯರು ಮತ್ತು 16 ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಬ್ಬರು ಸೋಂಕಿತರು ಕಂಟೈನ್ಮೆಂಟ್ ಪ್ರದೇಶದವರು. ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದೆ. ಇಬ್ಬರು ತೆಲಂಗಾಣದಿಂದ ವಾಪಸಾದವರು. ಉಳಿದಂತೆ ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದಾರೆ.
ಇನ್ನುಳಿದಂತೆ ಮೂವರ ಟ್ರಾವೆಲ್ ಹಿಸ್ಟರಿ ಸದ್ಯ ಲಭ್ಯವಾಗಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1226ಕ್ಕೆ ಏರಿಕೆಯಾಗಿದೆ. ಇಂದು 34 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.