ETV Bharat / state

ಕಲಬುರಗಿಯಲ್ಲಿ ಎನ್ಐಎ ದಾಳಿ: ಪಿಎಫ್ಐ ಜಿಲ್ಲಾಧ್ಯಕ್ಷನ ಮನೆಯಲ್ಲಿ 14 ಲಕ್ಷ ನಗದು, 17 ಹೊಸ ಮೊಬೈಲ್ ಪತ್ತೆ - ಹೊಸ ಮೊಬೈಲ್ ಪತ್ತೆ

ಶೇಖ್ ಎಜಾಜ್ ಅಲಿ ಮನೆಯಲ್ಲಿ ಪತ್ತೆಯಾದ 14 ಲಕ್ಷ ರೂಪಾಯಿ ನಗದು ಹಾಗೂ 17 ಹೊಸ ಮೊಬೈಲ್​ಗಳ ಮೂಲಗಳ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

14-lakh-cash-17-new-mobile-phones-found-in-pfi-district-presidents-house-at-kalaburagi
ಕಲಬುರಗಿಯಲ್ಲಿ ಎನ್ಐಎ ದಾಳಿ: ಪಿಎಫ್ಐ ಜಿಲ್ಲಾಧ್ಯಕ್ಷನ ಮನೆಯಲ್ಲಿ 14 ಲಕ್ಷ ನಗದು, 17 ಹೊಸ ಮೊಬೈಲ್ ಪತ್ತೆ
author img

By

Published : Sep 22, 2022, 7:19 PM IST

Updated : Sep 22, 2022, 9:11 PM IST

ಕಲಬುರಗಿ: ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದಾಳಿ ವೇಳೆ ಕಲಬುರಗಿ ಪಿಎಫ್​ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮನೆಯಲ್ಲಿ 14 ಲಕ್ಷ ರೂಪಾಯಿ ನಗದು, 17 ಹೊಸ ಮೊಬೈಲ್ ಮತ್ತು ಒಂದು ಟ್ಯಾಬ್ ಹಾಗೂ ಪಿಎಫ್​ಐಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಎಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೇಶಾದ್ಯಂತ ಪಿಎಫ್ಐ, ಎಸ್​ಡಿಪಿಐ ಮುಖಂಡರ ಮನೆ, ಕಚೇರಿಗಳ ಮೇಲೆ ಇಂದು ಎನ್​ಐಎ ತಂಡ ದಾಳಿ ನಡೆಸಿದೆ. ಅದೇ ರೀತಿ ಕಲಬುರಗಿಯಲ್ಲೂ ಪಿಎಫ್ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮತ್ತು ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದೆ‌. ನಸುಕಿನ ಜಾವ ಸುಮಾರು 3:30ರ ಫುಲ್ ಫೋರ್ಸ್​ನೊಂದಿಗೆ ದಾಳಿ ನಡೆಸಿರುವ ಎನ್​ಐಎ ತಂಡ, ಕಲಬುರಗಿ ನಗರದ ಮಹೆಬೂಬ್​ ನಗರದಲ್ಲಿರುವ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಜಾಲಾಡಿದೆ.

ಕಲಬುರಗಿಯಲ್ಲಿ ಎನ್ಐಎ ದಾಳಿ: ಪಿಎಫ್ಐ ಜಿಲ್ಲಾಧ್ಯಕ್ಷನ ಮನೆಯಲ್ಲಿ 14 ಲಕ್ಷ ನಗದು, 17 ಹೊಸ ಮೊಬೈಲ್ ಪತ್ತೆ

ಈ ವೇಳೆ ಶೇಖ್ ಎಜಾಜ್ ಅಲಿ ಮನೆಯಲ್ಲಿ 14 ಲಕ್ಷ ನಗದು ಹಣ, 17 ಹೊಸ ಮೊಬೈಲ್ ಮತ್ತು ಒಂದು ಟ್ಯಾಬ್ ಪತ್ತೆಯಾಗಿದೆ. ಹೀಗಾಗಿ ನಗದು ಹಣದ ಮೂಲ ಮತ್ತು 17 ಹೊಸ ಮೊಬೈಲ್​ ಇಟ್ಟುಕೊಂಡಿರುವ ಬಗ್ಗೆ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿಯೇ ಶೇಖ್​ ಎಜಾಜ್ ಅಲಿಯನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಇತ್ತ, ದಾಳಿ ವೇಳೆ ಪಿಎಫ್ಐ ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಕಲಬುರಗಿಯಲ್ಲಿ ಇರಲಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬರುವ ಮಾರ್ಗಮಧ್ಯದಲ್ಲಿ ಈತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ಇನ್ನು, ಶೇಖ್​ ಎಜಾಜ್ ಅಲಿಯನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದಾಗ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶೇಖ ಎಜಾಜ್ ಅಲಿ ಮನೆ ಮುಂಭಾಗದಲ್ಲಿ ಎರಡು ಕೆಎಸ್​ಆರ್​ಪಿ ತಂಡ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಎಜಾಜ್ ಅಲಿ ವಶಕ್ಕೆ ಪಡೆದ ಎನ್‌ಐಎ

Last Updated : Sep 22, 2022, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.