ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ, ಇದರೊಂದಿಗೆ ಸಾವಿನ ಸಂಖ್ಯೆ 294ಕ್ಕೆ ಏರಿಕೆಯಾಗಿದೆ.
ಅಫಜಲಪುರ ತಾಲೂಕಿನ ಬೈರಾಮಡಗಿ ಗ್ರಾಮದ 64 ವರ್ಷದ ವೃದ್ಧ, ಕಲಬುರಗಿಯ ದೇವಾ ನಗರ ನಿವಾಸಿ 84 ವರ್ಷದ ವೃದ್ಧ, ಜೇವರ್ಗಿ ತಾಲೂಕು ಯತನಾಲ ಗ್ರಾಮದ 85 ವರ್ಷದ ವೃದ್ಧ ಹಾಗೂ ಕಲಬುರಗಿ ಮಕ್ತಂಪೂರ ಬಡಾವಣೆಯ 48 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಅಲ್ಲದೆ ಶನಿವಾರ ಹೊಸದಾಗಿ 104 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ 18,430ಕ್ಕೆ ಏರಿಕೆಯಾಗಿದೆ. 81 ಜನರು ಗುಣಮುಖರಾಗಿದ್ದು, 16,137 ಮಂದಿ ಚೇತರಿಸಿಕೊಂಡಿದ್ದಾರೆ. 1,999 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.