ಹಾವೇರಿ : ಲಾಕ್ಡೌನ್ ಪದೇಪದೆ ಉಲ್ಲಂಘನೆಯಾಗುತ್ತಿದೆ. ಜನರು ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಎಸ್ಪಿ ಕೆ ಜಿ ದೇವರಾಜ್ ಮನವಿ ಮಾಡಿದ್ದಾರೆ.
ಪೊಲೀಸ್, ಆರೋಗ್ಯ ಸೇರಿ ವಿವಿಧ ಇಲಾಖೆಗಳು ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿವೆ. ಆದರೆ, ಜನರ ಉದ್ಧಟತನ ಮಾತ್ರ ನಿಂತಿಲ್ಲ. ಕಳೆದ 23ರಿಂದ ಬೈಕ್ ಸವಾರರನ್ನ ಪರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ 23 ರಿಂದ ಈವರೆಗೆ 550 ವಾಹನಗಳನ್ನ ಸೀಜ್ ಮಾಡಲಾಗಿದೆ. ಲಾಕ್ಡೌನ್ಗೆ ಸಂಬಂಧಿಸಿದಂತೆ 10 ಕೇಸ್ ದಾಖಲು ಮಾಡಲಾಗಿದೆ. ರಸ್ತೆ ನಿಯಮ ಉಲ್ಲಂಘಿಸಿದವರಿಂದ 14 ಲಕ್ಷ ದಂಡ ಹಣ ವಸೂಲಿ ಮಾಡಲಾಗಿದೆ. ಇಷ್ಟಾದರೂ ಸಹ ನಿಯಮ ಉಲ್ಲಂಘನೆಯಾಗುತ್ತಿದೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನರ ಸಹಕಾರ ಕೋರಿದ್ದಾರೆ.
ಜಿಲ್ಲೆಯಲ್ಲಿ ತಬ್ಲಿಘಿಗಳ ಸಂಖ್ಯೆ ಅತಿಯಾಗಿಲ್ಲ. ಈಗಾಗಲೇ ದೆಹಲಿಗೆ ವಿವಿಧ ಕಾರಣಗಳಿಂದ ಹೋದವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಅವರ ಫಲಿತಾಂಶ ನೆಗೆಟಿವ್ ಬಂದಿದೆ. ಈ ಹೊರತಾಗಿ ಸಹ ಜಿಲ್ಲೆಯಲ್ಲಿ ಯಾರಾದರು ತಬ್ಲಿಘಿಗಳಿದ್ದರೆ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಒಳಗಾಗಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.