ಹಾವೇರಿ : ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಕುರಿತು ಪ್ರಶ್ನಿಸಲು ಬಿಜೆಪಿಯ ಮುಖಂಡರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದಿರೋ ಅಮೀತ್ ಶಾ ಈ ರಾಷ್ಟ್ರದ ಗೃಹ ಸಚಿವರು, ರಾಷ್ಟ್ರದ ಬಿಜೆಪಿ ಅಧ್ಯಕ್ಷರು. ಇನ್ನು, ಬಿಜೆಪಿ ಮುಗಿಸೋದೆ ನನ್ನ ಗುರಿ ಅಂದಿದ್ದ ಸಿಎಂ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದವರು. ಅಂಥವರಿಗೆ ಅಧಿಕಾರ ನೀಡಿರೋ ಬಿಜೆಪಿಗೆ ಡಿಕೆಶಿ ಬಗ್ಗೆ ಪ್ರಶ್ನಿಸೋ ನೈತಿಕತೆ ಇಲ್ಲ.
ಡಿಕೆಶಿ ಅವರಿಗೆ ಈಗಲೂ ಪಕ್ಷದ ಯಾವುದೇ ಜವಾಬ್ದಾರಿ ಕೊಟ್ರೂ ಅದನ್ನ ಸಮರ್ಥವಾಗಿ ನಿಭಾಯಿಸೋ ಶಕ್ತಿ ಅವರಲ್ಲಿದೆ. ಡಿಕೆಶಿಗೆ ಜವಾಬ್ದಾರಿ ನೀಡೋ ವಿಚಾರದಲ್ಲಿ ಮನಬಂದಂತೆ ಮಾತನಾಡ್ತಿರೋ ಬಿಜೆಪಿಗೆ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸ್ತಾರೆ ಎಂದು ವಿ ಎಸ್ ಉಗ್ರಪ್ಪ ಕಿಡಿಕಾರಿದರು.