ಹಾವೇರಿ : ಸ್ನಾನ ಮಾಡಲು ತುಂಗಭದ್ರಾ ನದಿಗೆ ತೆರಳಿದ್ದ ಯುವಕರು ನೀರು ಪಾಲಾದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಬೈರನಪಾದ ಗ್ರಾಮದ ಬಳಿ ನಡೆದಿದೆ.
ಬುಳ್ಳಾಪುರ ಗ್ರಾಮದ ಸಂತೋಷ ಆಲದಗೇರಿ (20) ಮತ್ತು ಅಶೋಕ ನಂದೀಹಳ್ಳಿ (20) ಸ್ನಾನಕ್ಕಾಗಿ ಬೈರನಪಾದ ಗ್ರಾಮದ ಬಳಿಯಿರುವ ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ಇಬ್ಬರು ನೀರು ಪಾಲಾಗಿ ಸಾವನ್ನಪ್ಪಿದ್ದಾರೆ.
ಇಬ್ಬರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ. ಈ ಕುರಿತು ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.