ETV Bharat / state

ತುಂಗಾ ಮೇಲ್ದಂಡೆ ಯೋಜನೆ: ಕಾಲುವೆ ಸರಿಪಡಿಸಲು ರೈತರ ಆಗ್ರಹ - farmer urges to repair the canal

ಹಾವೇರಿ ಜಿಲ್ಲೆಯ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಡಿ ಕಾಲುವೆಯನ್ನು ನಿರ್ಮಿಸಲಾಗಿತ್ತು. ಆದರೆ, ಕಾಲುವೆ ನಿರುಪಯುಕ್ತವಾಗಿದ್ದು, ರೈತರು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

urges to repair the canal
ತುಂಗಾ ಮೇಲ್ದಂಡೆ ಯೋಜನೆ
author img

By

Published : Feb 22, 2022, 3:44 PM IST

ಹಾವೇರಿ : ಹಾವೇರಿ ಜಿಲ್ಲೆಯ ರೈತರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು ತುಂಗಾ ಮೇಲ್ದಂಡೆ ಯೋಜನೆ. ಈ ಯೋಜನೆ ಹಾವೇರಿ ಜಿಲ್ಲೆಯ ರೈತರಿಗೆ ವರದಾನ ಎನ್ನಲಾಗಿತ್ತು. ಆದರೆ, ಹಾವೇರಿ ಜಿಲ್ಲೆಯ ರೈತರಿಗೆ ವರದಾನವಾಗಬೇಕಿದ್ದ ಯೋಜನೆ ಶಾಪವಾಗಿ ಪರಿಣಮಿಸಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಹಿರೇಕೆರೂರು,ರಾಣೆಬೆನ್ನೂರು,ಹಾವೇರಿ ಹಾನಗಲ್ ತಾಲೂಕುಗಳಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಡಿ ಕಾಲುವೆ ನಿರ್ಮಿಸಲಾಗಿದೆ. ಯೋಜನೆಗಾಗಿ ಈ ಹಿಂದೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಈ ರೀತಿ ಸ್ವಾಧೀನಪಡಿಸಿಕೊಂಡ ರೈತರಿಗೆ ಯಾವುದೇ ಸಮರ್ಪಕ ಪರಿಹಾರ ಕೊಟ್ಟಿಲ್ಲ.

ಇನ್ನು ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಪರಿಹಾರ ಸಿಕ್ಕಿದ್ದು ಬಿಟ್ಟರೇ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಹಲವು ರೈತರು ಅಸುನೀಗಿದ್ದಾರೆ. ಆದರೆ ಪರಿಹಾರ ಮಾತ್ರ ಮರಿಚೀಕೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು ಕಾಲುವೆಯನ್ನು ಕೆಲವು ಕಡೆ ಅವೈಜ್ಞಾನಿಕ ನಿರ್ಮಿಸಲಾಗಿದ್ದು, ನೀರು ಸರಾಗವಾಗಿ ಹರಿಯದೇ ಕಾಲುವೆಯಲ್ಲಿ ನಿಲ್ಲುತ್ತಿದೆ. ಮುಖ್ಯಕಾಲುವೆಗಳ ಕಾಮಗಾರಿ ಮುಗಿದಿದ್ದು ಉಪಕಾಲುವೆಗಳ ನಿರ್ಮಾಣ ಇನ್ನೂ ಮಾಡಲಾಗಿಲ್ಲ. ಇದರಿಂದ ನೀರು ಬೇಕಾದ ರೈತರಿಗೆ ಕಾಲುವೆಯಿಂದ ನೀರು ಸಿಗುತ್ತಿಲ್ಲ.

ಕಾಲುವೆಯಲ್ಲಿ ಬೆಳೆದ ಮುಳ್ಳುಕಂಟಿ ಸೇರಿದಂತೆ ಕಸ ತೆಗೆಯಲು ಪ್ರತಿವರ್ಷ ಕೋಟ್ಯಂತರ ರೂಪಾಯಿ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಹಣವನ್ನ ಅಧಿಕಾರಿಗಳು ಖರ್ಚು ಮಾಡುವುದೇ ಇಲ್ಲ. ಹಣ ತೆಗೆದುಕೊಳ್ಳುವ ಅಧಿಕಾರಿಗಳು ಅಲ್ಲಿ ಒಂದಿಷ್ಟು ಇಲ್ಲಿ ಒಂದಿಷ್ಟು ಖರ್ಚು ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಇದರಿಂದಾಗಿ ಕಾಲುವೆಯಲ್ಲಿ ಮುಳ್ಳುಕಂಟಿ ಬೆಳೆದು ಕಾಲುವೆಯಿಂದ ನೀರು ರೈತರ ಜಮೀನುಗಳಿಗೆ ಬಸಿಯುತ್ತಿದೆ. ಇದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳೂ ಹಾಳಾಗುತ್ತಿದೆ ಎಂದು ದೂರಲಾಗಿದೆ.

ಸರ್ಕಾರ ಆದಷ್ಟು ಬೇಗ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಅವೈಜ್ಞಾನಿಕವಾಗಿ ನಿರ್ಮಾಣವಾದ ಕಾಲುವೆಯನ್ನು ದುರಸ್ತಿಪಡಿಸಬೇಕು ಜೊತೆಗೆ ಪ್ರತಿ ಮಳೆಗಾಲ ಬರುವ ಮುನ್ನ ಕಾಲುವೆಗಳನ್ನು ಶುಚಿಗೊಳಿಸಬೇಕು. ಉಪಕಾಲುವೆಗಳ ಕಾಮಗಾರಿ ಮುಗಿಸಿ ಮುಖ್ಯಕಾಲುವೆಗೆ ಸೇರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂಧಿಸಿ ಯೋಜನೆಯನ್ನ ನಿಜವಾಗಿ ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಓದಿ :ಪಟ ಪಟ ಅಂತಾ ಮಾತನಾಡುತ್ತಿದ್ದ ರೇಡಿಯೋ ಜಾಕಿ ರಚನಾ ಇನ್ನಿಲ್ಲ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.