ಹಾವೇರಿ: ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಹ ವರುಣ ಆರ್ಭಟಿಸಿದ್ದಾನೆ.
ಸಂಜೆ ಸುರಿದ ಮಳೆಗೆ ನಗರದ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಆರಂಭದಲ್ಲಿ ಧಾರಾಕಾರವಾಗಿ ಸುರಿದ ಮಳೆ ನಂತರ ಜಿಟಿ ಜಿಟಿಯಾಗಿ ಸುರಿಯಿತು. ಶಿಗ್ಗಾಂವಿ ತಾಲೂಕು ಹಾನಗಲ್ ತಾಲೂಕಿನಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಶೇಂಗಾ, ಸೋಯಾಬಿನ್, ಮೆಕ್ಕಜೋಳದ ಬೆಳೆದ ರೈತರು ಸಹ ಆತಂಕ ವ್ಯಕ್ತಪಡಿಸಿದರು.