ETV Bharat / state

11 ವರ್ಷದ ಬಾಲಕನ ಅಪಹರಣ ಪ್ರಕರಣ ಕೊಲೆಯಲ್ಲಿ ಅಂತ್ಯ: ಅಪ್ರಾಪ್ತ ಸೇರಿ ಇಬ್ಬರ ಬಂಧನ - boy culminates in the murder

ಆರೋಪಿಗಳು ಮೊದಲು ಬಾಲಕನನ್ನು ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ನಗರದ ಸಮೀಪವಿರುವ ಹೆಗ್ಗೇರಿಯಲ್ಲಿ ಎಸೆದಿದ್ದಾರೆ. ಶವ ಮತ್ತೆ ಮೇಲೆ ಬರಬಹುದೆಂಬ ಅನುಮಾನದಿಂದ ಶವವನ್ನ ತಂದು ಮನೆಯ ಎದುರಿಗೆ ಇರುವ ಪಾರ್ಕ್‌ನಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ.

ಇಬ್ಬರ ಬಂಧನ
ಇಬ್ಬರ ಬಂಧನ
author img

By

Published : Mar 12, 2021, 10:33 PM IST

ಹಾವೇರಿ: 11 ವರ್ಷದ ಬಾಲಕನ ಅಪಹರಣ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಈ ಪ್ರಕರಣ ಸಂಬಂಧ ನಗರದ ಅಪ್ರಾಪ್ತ ಬಾಲಕ ಸೇರಿದಂತೆ 20 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಅಶ್ವಿನಿ ನಗರದ 11 ವರ್ಷದ ತೇಜಸ್ ಗೌಡ ಕೊಲೆಯಾದ ಬಾಲಕ. ಅಪ್ರಾಪ್ತ ಬಾಲಕ ಸೇರಿದಂತೆ 20 ವರ್ಷದ ರಿತೀಶ್ ಮೇಟಿ ಆರೋಪಿಗಳು. ಜೀವನದಲ್ಲಿ ಯಾವುದೇ ಕಷ್ಟವಿಲ್ಲದೆ ಹಣ ಮಾಡಬೇಕೆಂಬ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿಸಿದ್ದಾರೆಂದು ಎಸ್​ಪಿ ಕೆ.ಜಿ.ದೇವರಾಜ್ ತಿಳಿಸಿದ್ದಾರೆ. ಆರೋಪಿಗಳ ಕೃತ್ಯಕ್ಕೆ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

11 ವರ್ಷದ ಬಾಲಕನ ಅಪಹರಣ ಪ್ರಕರಣ ಕೊಲೆಯಲ್ಲಿ ಅಂತ್ಯ

ಘಟನೆಯ ಹಿನ್ನಲೆ:

ಹಾವೇರಿಯ ಅಶ್ವಿನಿ ನಗರದ 11 ವರ್ಷದ ತೇಜಸ್‌ಗೌಡ ಇದೇ 7ರಂದು ಕಾಣೆಯಾಗಿದ್ದ. ಈ ಕುರಿತಂತೆ ಆತನ ತಂದೆ ನ್ಯಾಯವಾದಿ ಜಗದೀಶ ಮಲ್ಲಿಕೇರಿ ಇದೇ 8ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಆರೋಪಿಗಳು ಮೊದಲು ಬಾಲಕನನ್ನು ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ನಗರದ ಸಮೀಪವಿರುವ ಹೆಗ್ಗೇರಿಯಲ್ಲಿ ಎಸೆದಿದ್ದಾರೆ. ಶವ ಮತ್ತೆ ಮೇಲೆ ಬರಬಹುದೆಂಬ ಅನುಮಾನದಿಂದ ಶವವನ್ನ ತಂದು ಮನೆಯ ಎದುರಿಗೆ ಇರುವ ಪಾರ್ಕ್‌ನಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಆರೋಪಿ ರಿತೀಶ್ ತಾಯಿ ಪ್ರಾಧ್ಯಾಪಕಿ, ತಂದೆ ಪ್ರೊಪೆಸರ್. ಶಿಕ್ಷಿಕರ ಮಕ್ಕಳೇ ಈ ಕೃತ್ಯ ಎಸಗಿರುವುದು ನಗರದ ಜನರಲ್ಲಿ ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.