ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆರೋಗ್ಯಾಧಿಕಾರಿಯನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.
ಡಾ.ಝಡ್.ಆರ್.ಮಕಾಂದರ್ ಅಮಾನತ್ತಾದ ಆರೋಗ್ಯಾಧಿಕಾರಿ. ಮಕಾಂದರ್ ಮಾರ್ಚ್ ಎರಡರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಅವರಿಗೆ ಮತ್ತು ಅವರ ಪತ್ನಿ ವನಜಾ ಪಾಟೀಲ್‌ಗೆ ಕೋವಿಡ್ ಲಸಿಕೆ ನೀಡಿದ್ದರು. ಆರೋಗ್ಯಾಧಿಕಾರಿಗಳ ಈ ನಡೆ ತೀವ್ರ ವಿವಾದಕ್ಕೆ ಒಳಗಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ಡಾ.ತ್ರಿಲೋಕಚಂದ್ರ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮಕಾಂದರ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.