ಹಾವೇರಿ : ಕೊರೊನಾ ವೈರಸ್ನಿಂದಾಗಿ ಇಂದು ಆಚರಿಸಬೇಕಿದ್ದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಆಚರಿಸದೇ ನಗರದ ಜೈನ್ ಬಸದಿಯನ್ನು ಬಂದ್ ಮಾಡಲಾಗಿತ್ತು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ಮಹಾವೀರ ಜಯಂತಿಗೂ ಸಹ ಅಡ್ಡಿಯುಂಟು ಮಾಡಿದೆ. ಜಯಂತಿ ಹಿನ್ನೆಲೆ ವಿಶೇಷವಾಗಿ ನಡೆಯಬೇಕಿದ್ದ ಮಹಾವೀರನ ಪೂಜೆ ಅತ್ಯಂತ ಸರಳವಾಗಿ ನಡೆದಿದೆ. ಜೈನ್ ಧರ್ಮಿಯರು ಮನೆ ಮನೆಗಳಲ್ಲಿ ಮಹಾವೀರ ಜಯಂತಿ ಆಚರಿಸಿ, ಆದಷ್ಟು ಬೇಗ ಜಗತ್ತನ್ನ ಕೊರೊನಾದಿಂದ ದೇಶವನ್ನು ಕಾಪಾಡುವಂತೆ ಮಹಾವೀರನಲ್ಲಿ ಬೇಡಿಕೊಂಡರು.