ETV Bharat / state

ಹಾವೇರಿ: ಸಿಎಂ ಆಗಮನಕ್ಕಾಗಿ ಆಲದಕಟ್ಟಿ ಗ್ರಾಮದಲ್ಲಿ ರೋಡ್ ಹಂಪ್ಸ್ ತೆರವು - Haveri

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಂಪ್ಸ್ ತೆರವು ಕಾರ್ಯ ಮಾಡಿದ್ದಾರೆ.

PWD removing Road Humps
ಆಲದಕಟ್ಟಿ ಗ್ರಾಮದಲ್ಲಿ ಹಂಪ್ಸ್ ತೆರವು ಕಾರ್ಯಾಚರಣೆ
author img

By

Published : Oct 21, 2021, 1:32 PM IST

ಹಾವೇರಿ: ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಹಂಪ್ಸ್‌ರಹಿತ ಸಂಚಾರ ಒದಗಿಸುವ ನಿಟ್ಟಿನಲ್ಲಿ ಸಿಎಂ ಸಂಚರಿಸುವ ಮಾರ್ಗದೆಲ್ಲೆಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ.

ಆಲದಕಟ್ಟಿ ಗ್ರಾಮದಲ್ಲಿ ಹಂಪ್ಸ್ ತೆರವು ಕಾರ್ಯಾಚರಣೆ

ಸಿಎಂ ಹಾಗು ರಾಜಕಾರಣಿಗಳು ಬರುತ್ತಾರೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಹಂಪ್ಸ್ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಶಾಲೆ ಇರುವ ಕಾರಣಕ್ಕಾಗಿ ರೋಡ್ ಹಂಪ್ಸ್ ಹಾಕಲಾಗಿತ್ತು. ಸಿಎಂ ಇದೇ ಮಾರ್ಗದಲ್ಲಿ ವಾಪಸ್ ಹೋಗುತ್ತಾರೆ ಎಂಬ ದೃಷ್ಟಿಯಿಂದ ಕಳೆದ ಎರಡು ವರ್ಷಗಳಿಂದ ಇದ್ದ ರಸ್ತೆ ಉಬ್ಬುಗಳನ್ನು ತೆರವು ಮಾಡಲಾಗಿದೆ.

ಹಾವೇರಿ ಹಾನಗಲ್ ರಸ್ತೆಯಲ್ಲಿನ 8 ರಿಂದ 10 ಕಡೆಗಳಲ್ಲಿರುವ ರೋಡ್ ಹಂಪ್ಸ್ ತೆರವು ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಸ್ತೆ ರಿಪೇರಿ ಮಾಡುವುದು, ರೋಡ್ ಹಂಪ್ಸ್ ತೆರವುಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಇದನ್ನೂ ಓದಿ: ಜನರ ಮನಸ್ಸು ಗೆಲ್ಲಬೇಕು, ವೈಯಕ್ತಿಕ ನಿಂದನೆ ಸರಿಯಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.