ರಾಣೆಬೆನ್ನೂರು : ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ಪಡೆಯುವ ಆತುರದಿಂದ ಜನ ಮುಗಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಸರ್ಕಾರ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಜನರು ಹೊರಗಡೆ ಬರಬಾರದು ಎಂಬ ಉದ್ದೇಶದಿಂದ ಎರಡು ತಿಂಗಳ ಪಡಿತರ ವಿತರಣೆ ಮಾಡುತ್ತಿದೆ. ಇದನ್ನ ಪಡೆಯಲು ಪಡಿತರ ಚೀಟಿದಾರರು ಮುಗಿಬಿದ್ದಿದ್ದಾರೆ.
ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರೂ ಕೂಡ ಜನರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ನಿಯಮ ಗಾಳಿಗೆ ತೂರಿ ಜನ ಗುಂಪು ಸೇರುವುದರಿಂದ ಕೊರೊನಾ ವೈರಸ್ ಎಲ್ಲರಿಗೂ ಹರಡುತ್ತದೆ ಎಂಬುವುದನ್ನೂ ಅರಿಯದ ಸ್ಥಿತಿಗೆ ತಲುಪಿದ್ದಾರೆ.