ರಾಣೆಬೆನ್ನೂರು: ಪತ್ರಿಕೋದ್ಯಮ, ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪ ಬಾಲ್ಯ ಜೀವನ ಕಳೆದಿದ್ದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ.
ಪಾಪು 14/01/1922 ರಲ್ಲಿ ತಮ್ಮ ತಾಯಿಯ ತವರೂರಾದ ಕುರಬಗೊಂಡದಲ್ಲಿ ಜನಿಸುತ್ತಾರೆ. ಬಾಲ್ಯ ಜೀವನ ಮತ್ತು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು ಹಲಗೇರಿ ಗ್ರಾಮದಲ್ಲಿ.ತದನಂತರ ಬ್ಯಾಡಗಿಯಲ್ಲಿ ಇಂಗ್ಲಿಷ್ ಶಿಕ್ಷಣ ಪಡೆಯುತ್ತಾರೆ. 1934ರಲ್ಲಿ ಗಾಂಧಿಜೀಯವರು ಬ್ಯಾಡಗಿಯಲ್ಲಿ ಹರಿಜನ ಪ್ರವಾಸ ಕೈಗೊಂಡಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಬೆನ್ನು ತಟ್ಟಿಸಿಕೊಂಡಿದ್ದರು.
ಪಾಟೀಲ ಪುಟ್ಟಪ್ಪನವರ ಹಲಗೇರಿಯಲ್ಲಿ ಬಾಲ್ಯ ಕಳೆದಿದ್ದ ಮನೆಯಲ್ಲಿ ಇದೀಗ ಪಾಪು ಸಂಬಂಧಿಕರು ವಾಸ ಮಾಡುತ್ತಿದ್ದಾರೆ ಎಂಬುದು ವಿಶೇಷ.