ETV Bharat / state

ಹಾವೇರಿಯಲ್ಲಿ ₹19 ಕೋಟಿ ವೆಚ್ಚದಲ್ಲಿ ನಿರ್ಮಾಣವಾಯಿತು ನೂತನ ಎಸ್ಪಿ ಕಚೇರಿ - ಈಟಿವಿ ಭಾರತ ಕನ್ನಡ

ಹಾವೇರಿ ಜಿಲ್ಲೆಯ ಕೇಂದ್ರ ಭಾಗದಲ್ಲಿ ನೂತನ ಎಸ್ಪಿ ಕಚೇರಿ ನಿರ್ಮಾಣಗೊಂಡಿದೆ.

ನೂತನ ಎಸ್ಪಿ ಕಚೇರಿ
ನೂತನ ಎಸ್ಪಿ ಕಚೇರಿ
author img

By

Published : Jun 29, 2023, 7:06 AM IST

Updated : Jun 29, 2023, 4:30 PM IST

ಹಾವೇರಿಯಲ್ಲಿ ನೂತನ ಎಸ್ಪಿ ಕಚೇರಿ

ಹಾವೇರಿ: ನಗರದ ಮಧ್ಯಭಾಗದ ಶಹರಾ ಪೊಲೀಸ್​ ಠಾಣೆ ಪಕ್ಕದಲ್ಲಿ ₹19 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸುಸಜ್ಜಿತ ಜಿಲ್ಲಾ ಪೊಲೀಸ್​ ಅಧೀಕ್ಷಕರ ಕಚೇರಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ದವಾಗಿದೆ.

ಈ ಹಿಂದೆ ಸೂಕ್ತ ಸ್ಥಳವಿಲ್ಲದೇ ಕೆರಿಮತ್ತಿಹಳ್ಳಿಯಲ್ಲಿ ಪೊಲೀಸ್ ಆಧೀಕ್ಷಕರ ಕಚೇರಿ ನಿರ್ಮಾಣ ಮಾಡಲಾಗಿತ್ತು. ಕಚೇರಿ ಜಿಲ್ಲಾಕೇಂದ್ರ ಹಾವೇರಿಯಿಂದ ಐದು ಕೀಮಿ ದೂರದಲ್ಲಿತ್ತು. ಅದರಲ್ಲೂ ಮಳೆಗಾಲ ಬಂದರೆ ಅಲ್ಲಿಗೆ ತೆರಳುವುದು ದುಸ್ತರವಾಗಿತ್ತು. ಜನಸಾಮಾನ್ಯರು ತಮ್ಮ ದೂರು ದುಮ್ಮಾನಗಳ ಹೇಳಿಕೊಳ್ಳಲು ಎಸ್ಪಿ ಕಚೇರಿಗೆ ಅಲೆದಾಡುವುದೇ ಒಂದು ಕೆಲಸವಾಗಿತ್ತು.

ಮಳೆಗಾಲದಲ್ಲಿ ಹೆಗ್ಗೇರಿ ಮೈದುಂಬಿದರೆ ಹಾವೇರಿ ಎಸ್ಪಿ ಕಚೇರಿ ಹತ್ತೀರ ಸಹ ನೀರು ಕಾಣಿಸಿಕೊಳ್ಳುತ್ತಿತ್ತು. ಈ ಮಧ್ಯೆ ಅಧಿಕಾರಿಗಳು ಜನಪ್ರತಿನಿಧಿಗಳು ಈ ಸಮಸ್ಯೆ ಬಗೆಹರಿಸಲು ಹಲವಾರು ಸಲ ಪ್ರಯತ್ನಿಸಿದ್ದರು ಸಾಧ್ಯವಾಗಿರಲಿಲ್ಲ. ಕೊನೆಗೆ ಹಾವೇರಿ ಹಳೆಯ ನ್ಯಾಯಾಲಯ ಸಂಕೀರ್ಣಕ್ಕೆ ಎಸ್ಪಿ ಕಚೇರಿಯನ್ನ ಸ್ಥಳಾಂತರ ಮಾಡಲಾಯಿತು. ಆದರೆ, ಇಲ್ಲಿ ಇನ್ನೊಂದಿಷ್ಟು ಸಮಸ್ಯೆಗಳು ಕಾಣಿಸಿಲಾರಂಭಿಸಿದವು. ನಗರದ ಮಧ್ಯಭಾಗದಲ್ಲಿ ಕಚೇರಿ ಇದ್ದಿದ್ದರಿಂದ ವಾಹನಗಳ ಪಾರ್ಕಿಂಗ್ ಸ್ಥಳಾವಕಾಶ ಇರಲಿಲ್ಲ.

ಇನ್ನು ಸದ ಜನಜಂಗುಳಿಯ ಗದ್ದಲದ ನಡುವೆ ಎಸ್ಪಿ ಕಚೇರಿ ನಡೆಯುತ್ತಿತ್ತು. ಈ ಸಮಸ್ಯೆಗಳನ್ನ ಅರಿತ ಜಿಲ್ಲಾಡಳಿತ ನೂತನ ಎಸ್ಪಿ ಕಚೇರಿ ಸ್ಥಾಪನೆಗೆ ಮುಂದಾಯಿತು. ಹಾವೇರಿ ಶಹರ ಪೊಲೀಸ್ ಠಾಣೆ ಪಕ್ಕದಲ್ಲಿದ್ದ ಹಾವೇರಿ ಪೊಲೀಸ್ ಅಧಿಕಾರಿಗಳ ವಸತಿ ಕಟ್ಟಡಗಳ ಜಾಗದಲ್ಲಿ ನೂತನ ಎಸ್ಪಿ ಕಚೇರಿ ಸ್ಥಾಪಿಸಲು ಮುಂದಾಯಿತು. ಅಲ್ಲಿದ್ದ ಬಹುತೇಕ ಹಾಳಾಗಿದ್ದ ಮನೆಗಳನ್ನ ಕೆಡವಿ ಇದೀಗ ಸುಸಜ್ಜಿತ ಎಸ್ಪಿ ಕಚೇರಿಯನ್ನ ಸ್ಥಾಪಿಸಲಾಗಿದೆ.

ಸುಮಾರು ₹19 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಎಸ್ಪಿ ಕಚೇರಿ ನಿರ್ಮಿಸಲಾಗಿದೆ. ಆಧುನಿಕ ಕಚೇರಿಗಳಿಗೆ ಇರಬೇಕಾದ ಎಲ್ಲ ಸೌಕರ್ಯಗಳನ್ನ ಈ ನೂತನ ಕಚೇರಿಗೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ನೆಲಮಹಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೊದಲನೆಯ ಮಹಡಿಯಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ಕೊಠಡಿ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳನ್ನ ಕಚೇರಿಯಲ್ಲಿ ಒದಗಿಸಲಾಗಿದೆ.

ಇನ್ನು ನೂತನ ಎಸ್ಪಿ ಕಚೇರಿಗೆ ಹಸಿರು ಲಾನ್ ತೆಂಗಿನ ಮರಗಳು ಸೇರಿದಂತೆ ವಿವಿಧ ವೃಕ್ಷಗಳು ಮತ್ತಷ್ಟು ಮೆರುಗು ನೀಡಿವೆ. ನೂತನ ಎಸ್ಪಿ ಕಚೇರಿ ಪಕ್ಕದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆ ಇದೆ. ಅದರ ಪಕ್ಕದಲ್ಲಿ ಹಾವೇರಿ ಸಂಚಾರಿ ಪೊಲೀಸ್ ಠಾಣೆ ಇದೆ. ಇನ್ನೊಂದು ಬದಿಯಲ್ಲಿ ಲೋಕೋಪಯೋಗಿ ಕಚೇರಿ ಮತ್ತೊಂದು ಕಡೆ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಬಸ್ ನಿಲ್ದಾಣ ಸಹ ಕೂಗಳತೆಯ ದೂರದಲ್ಲಿದೆ. ಹೀಗಾಗಿ ನೂತನ ಎಸ್ಪಿ ಕಚೇರಿಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ.

ಕಟ್ಟಡದ ಬಹುತೇಕ ನಿರ್ಮಾಣ ಕಾರ್ಯ ಮುಗಿದಿದ್ದು ಅಂತಿಮ ಹಂತದ ಸ್ಪರ್ಷ ನೀಡಲಾಗುತ್ತಿದೆ. ಜುಲೈ ತಿಂಗಳ ಆರಂಭ ಅಥವಾ ಅಂತ್ಯದ ವೇಳೆಗೆ ನೂತನ ಎಸ್ಪಿ ಕಚೇರಿ ಲೋಕಾರ್ಪಣೆಗೊಳ್ಳಲಿದೆ. ಹಾವೇರಿಗೆ ಇದೀಗ ನೂತನ ಎಸ್ಪಿ ಕಚೇರಿಯಾಗಿದ್ದು ಸಾರ್ವಜನಿಕರ ಮೆಚ್ಚುಗಿಗೆ ಪಾತ್ರವಾಗಿದೆ. ಜಿಲ್ಲಾಡಳಿತ ಸರ್ಕಾರದ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: 25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಯಿತು ಸ್ಕೈವಾಕರ್: ಇದು ಯಾವೆಲ್ಲ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಗೊತ್ತಾ?

Last Updated : Jun 29, 2023, 4:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.