ETV Bharat / state

ಕೊರೊನಾ ಭೀತಿ: ಕುರಿ, ಕೋಳಿ ತಿನ್ನಬೇಡಿ ಎಂದ ಶಾಸಕ ನೆಹರು ಓಲೇಕಾರ್​

ಹಾವೇರಿಯಲ್ಲಿ ಮಾತನಾಡಿದ ಶಾಸಕ ನೆಹರು ಓಲಿಕಾರ್, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ​ ಕುರಿ, ಕೋಳಿ ಸೇರಿದಂತೆ ಮಾಂಸಹಾರ ತಿನ್ನಬೇಡಿ ಎಂದು ಹೇಳಿಕೆ ನೀಡಿದ್ದಾರೆ.

nehru-olikar-talk-about-corona-virus-in-haveri
ನೆಹರು ಓಲಿಕಾರ್​
author img

By

Published : Mar 14, 2020, 7:45 PM IST

Updated : Mar 14, 2020, 8:55 PM IST

ಹಾವೇರಿ: ಕುರಿ-ಕೋಳಿ, ಮಾಂಸ ತಿನ್ನುವುದರಿಂದ ಕೊರೊನಾ ವೈರಸ್​ ಬರುವುದಿಲ್ಲವೆಂದು ಈಗಾಗಲೇ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ಹಾವೇರಿ ಶಾಸಕ ನೆಹರು ಓಲೇಕಾರ್​​ ಯಾರು ಕುರಿ ಕೋಳಿ ಸೇರಿದಂತೆ ಮಾಂಸಹಾರ ತಿನ್ನಬೇಡಿ ಎಂದು ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕರೋನಾ ವೈರಸ್ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಸಾರ್ವಜನಿಕರು ಮಾಂಸ ತಿನ್ನಬೇಡಿ ಎಂದು ಕರೆ ನೀಡಿದ್ದಾರೆ.

ಶಾಸಕ ನೆಹರು ಓಲೇಕಾರ್​

ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾರಲ್ಲಿ ಕೂಡ ಕೊರೊನಾ ವೈರಸ್​ ಪತ್ತೆಯಾಗಿಲ್ಲ. ಇದರ ಮಧ್ಯೆ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೋಳಿಯಿಂದ ಕೊರೊನಾ ವೈರಸ್ ಹರಡಲ್ಲ ಅಂತಾ ಈಗಾಗಲೇ ಆರೋಗ್ಯ ಇಲಾಖೆ ಹೇಳಿದ್ದರೂ ಶಾಸಕರು ಈ ರೀತಿಯ ಹೇಳಿಕೆ ನೀಡಿದ್ದಾರೆ.

Last Updated : Mar 14, 2020, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.