ETV Bharat / state

ರಾಣೆಬೆನ್ನೂರು ಈಗ ರಾಣೆ'ಬಾರ್‌'ರೂರು.. ಸೂರ್ಯ ಕಿರಣ ತಾಕುವ ಮೊದ್ಲೇ ಕುಡುಕರಿಗೆ 'ಕಿಕ್‌'..

author img

By

Published : Jan 22, 2020, 7:19 PM IST

ಸರ್ಕಾರದ ನಿಯಮಗಳ ಪ್ರಕಾರ ಬೆಳಗ್ಗೆ 10 ಗಂಟೆ ನಂತರವಷ್ಟೇ ಮದ್ಯದಂಗಡಿಗಳನ್ನ ತೆರೆಯಬೇಕು. ಆದರೆ, ಇಲ್ಲಿನ ಬಾರ್ ಮಾಲೀಕರು ನಿಯಮವನ್ನು ಗಾಳಿಗೆ ತೂರಿ ಬೆಳಗ್ಗೆ 5 ಗಂಟೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸೂರ್ಯ ಹುಟ್ಟುವ ಮುನ್ನವೇ ಮದ್ಯದಂಗಡಿ ಓಪನ್, liquor store is open before the sun rises at Ranebennuru
ಸೂರ್ಯ ಹುಟ್ಟುವ ಮುನ್ನವೇ ಮದ್ಯದಂಗಡಿ ಓಪನ್

ಹಾವೇರಿ: ರಾಣೆಬೆನ್ನೂರು ನಗರದಲ್ಲಿ ಸೂರ್ಯನ ಕಿರಣ ಭೂಮಿಗೆ ತಾಕುವ ಮೊದಲೇ ಬಾರ್‌ಗಳು ತೆರೆದುಕೊಳ್ತವೆ. ಬೆಳ್‌ ಬೆಳಗ್ಗೆ 5 ಗಂಟೆಗೆ ಎಣ್ಣೆದಾಸರು ಬಾರ್‌ಗಳ ಮುಂದೆ ಹಾಜರಾಗ್ತಾರೆ.

ನಗರದ ಶ್ರೀ ಮಾಲತೇಶ ಬಾರ್, ಶಿವಾನಂದ ಬಾರ್ ಮತ್ತು ಸ್ವಾಗತ ವೈನ್ಸ್ ಸೇರಿ ಹಲವು ಮದ್ಯದಂಗಡಿಗಳು ನಸುಕಿನ ಜಾವ 5 ಗಂಟೆಗೆ ಬಾಗಿಲು ತೆರೆಯುತ್ತವೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರದ ನಿಯಮಗಳ ಪ್ರಕಾರ ಬೆಳಗ್ಗೆ10 ಗಂಟೆ ನಂತರ ಬಾರ್ ಅಂಗಡಿಗಳನ್ನ ತೆರೆಯಬೇಕು. ಆದರೆ, ಬಾರ್ ಮಾಲೀಕರು ಈ ನಿಯಮವನ್ನು ಗಾಳಿಗೆ ತೂರಿ ಬೆಳಗ್ಗೆ ಐದು ಗಂಟೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ.

ರಾಣೆಬೆನ್ನೂರು ಈಗ ರಾಣೆ'ಬಾರ್‌'ರೂರು..

ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಕಣ್ಣಿಗೆ ಕಾಣದವರಂತ್ತಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ದೂರು ನೀಡಿದರೂ ಬೆಲೆಯೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Intro:Kn_rnr_01_bar_open_early_morning_kac10001.

ಸೂರ್ಯ ಹುಟ್ಟುವ ಮುನ್ನ ಎಣ್ಣೆ ಕಿಕ್ ಶುರು..

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ನಗರದಲ್ಲಿ ಸೂರ್ಯ ಹುಟ್ಟುವ ಮುನ್ನ ಬಾರ್ ಗಳ ಬಾಗಿಲು ತೆರೆಯುತ್ತಿದ್ದು, ಮದ್ಯವ್ಯಸನಿಗಳು ಮದ್ಯದಂಗಡಿಗಳ ಮುಂದೆ ಬೆಳಿಗ್ಗೆ ಐದು ಗಂಟೆಯಿಂದಲೇ ಕಾದು ಕುಂತಿರುತ್ತಾರೆ.

Body:ಹೌದು ನಗರದ ಶ್ರೀ ಮಾಲತೇಶ ಬಾರ್, ಶಿವಾನಂದ ಬಾರ್ ಮತ್ತು ಸ್ವಾಗತ ವೈನ್ಸ್ ಸೇರಿದಂತೆ ಹಲವು ಮದ್ಯದಂಗಡಿಗಳು ಎಗ್ಗಿಲ್ಲದೆ ಬೆಳ್ಳಂಬೆಳಿಗ್ಗೆ 5 ಗಂಟೆಗೆ ವ್ಯಾಪಾರ ಶುರು ಮಾಡುತ್ತಿವೆ.

ಸರ್ಕಾರದ ನಿಯಮಗಳ ಪ್ರಕಾರ ಬೆಳಿಗ್ಗೆ 10 ಗಂಟೆ ನಂತರ ಬಾರ್ ಅಂಗಡಿಗಳನ್ನ ತೆರೆಯಬೇಕು ಎಂಬ ನಿಯಮವಿದೆ. ಆದರೆ ಬಾರ್ ಮಾಲೀಕರು ನಿಯಮ ಗಾಳಿಗೆ ತೂರಿ ಬೆಳಿಗ್ಗೆ ಐದು ಗಂಟೆಗೆ ಮದ್ಯ ಮಾರಾಟ ದಂಧೆ ನಡೆಯುತ್ತಿದೆ.
ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರು ಕೂಡ ಕಣ್ಣಿಗೆ ಕಾಣದಂತೆ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ದೂರು ನೀಡಿದರು ಬೆಲೆಯೇ ಇಲ್ಲದಂತಾಗಿದೆ.
ಬೆಳ್ಳಂಬೆಳಿಗ್ಗೆ ಮದ್ಯದಂಗಡಿ ತೆರೆಯುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಮದ್ಯದ ಅಮಲಿನಲ್ಲೇ ಕಾಲಕಳೆಯುತ್ತಿದ್ದಾರೆ. ಇದರಿಂದ ಬಡಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಸ್ಥಳೀಯ ಹೋರಾಟಗಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Conclusion:ಕೂಡಲೇ ನಿಯಮ ಬಾಹಿರವಾಗಿ ಬೇಗನೆ ತೆರೆಯುವ ಬಾರ್ ಗಳ ಅನುಮತಿ ರದ್ದುಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ. ಇತ್ತ ಅಬಕಾರಿ ಅಧಿಕಾರಿಗಳು ಮಾತ್ರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಾಣ ಉತ್ತರ ಹೇಳಿ ಜಾರಿಕೊಳ್ಳುತ್ತಲೇ ಇದ್ದಾರೆ.

Byte01_ನಾಗರಾಜ ಬಣಕಾರ,
ಸ್ಥಳೀಯ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.