ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲೊಂದು ನವವಿವಾಹಿತ ಜೋಡಿ ಬಿಜೆಪಿ ಗೆಲುವಿನ ವಿಜಯೋತ್ಸವ ಆಚರಿಸಿ ಸಂಭ್ರಮಿಸಿತು.
ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರೇಶ್ ಹಿರೇಮಠ ಮತ್ತು ನಯನಾ ಎಂಬುವರು ವಿಜಯೋತ್ಸವ ಆಚರಿಸುವ ಮೂಲಕ ಗಮನ ಸೆಳೆದರು. ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ ಮದುವೆ ಮಂಟಪದಿಂದ ಹೊರಗೆ ಬಂದು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕೇಸರಿ ಜಯವನ್ನ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮೋದಿಗೆ ಜಯಕಾರ ಹಾಕುವ ಮೂಲಕ ದಂಪತಿಯ ಸಂಬಂಧಿಕರು ವಿಜಯೋತ್ಸವ ಆಚರಿಸಿದರು.