ETV Bharat / state

ಮೆಕ್ಯಾನಿಕ್ ಎಂಜಿನಿಯರಿಂಗ್​ನಿಂದ ಮುಖ್ಯಮಂತ್ರಿ ಹುದ್ದೆವರೆಗೆ: ಬೊಮ್ಮಾಯಿಗೆ ಆಶೀರ್ವಾದ ಮಾಡಿದ ಶಿಗ್ಗಾಂವಿ - ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಜನ

ಮೆಕ್ಯಾನಿಕ್ ಎಂಜಿನಿಯರಿಂಗ್ ಮುಗಿಸಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಬೊಮ್ಮಾಯಿಗೆ ಶಿಗ್ಗಾಂವಿ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ.

Karnataka assembly election  CM Bommai won  CM Bommai won in Shiggamvi constituency  ಬೊಮ್ಮಾಯಿಗೆ ಆಶೀರ್ವಾದ ಮಾಡಿದ ಶಿಗ್ಗಾಂವಿ  ಮೆಕ್ಯಾನಿಕ್ ಎಂಜಿನಿಯರಿಂಗ್​ನಿಂದ ಮುಖ್ಯಮಂತ್ರಿ  ಮೆಕ್ಯಾನಿಕ್ ಎಂಜಿನಿಯರಿಂಗ್ ಮುಗಿಸಿ ಮುಖ್ಯಮಂತ್ರಿ  ಶಿಗ್ಗಾಂವಿ ಕ್ಷೇತ್ರದ ಜನರು ಆಶೀರ್ವಾದ  ತಂದೆಯಂತೆಯೇ ರಾಜಕೀಯದಲ್ಲಿ ಚತುರತೆ  ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಜನ  ಜನತಾದಳದಲ್ಲಿದ್ದ ಬಸವರಾಜ ಬೊಮ್ಮಾಯಿ
ಬೊಮ್ಮಾಯಿಗೆ ಆಶೀರ್ವಾದ ಮಾಡಿದ ಶಿಗ್ಗಾಂವಿ
author img

By

Published : May 13, 2023, 12:48 PM IST

ಹಾವೇರಿ: ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಫಲರಾದರೂ ಶಿಗ್ಗಾಂವಿಯಲ್ಲಿ ನಾಲ್ಕನೇ ಬಾರಿಗೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರ್​, ಪಠಾಣ್​ ಯಾಸೀರ್ ಅಹಮ್ಮದ್​ ಖಾನ್ ವಿರುದ್ಧ 22 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2004 ರಿಂದ ಬೊಮ್ಮಾಯಿ ಸತತವಾಗಿ ಇಲ್ಲಿ ಗೆಲುವು ಸಾಧಿಸಿದ್ದಾರೆ.

ತಂದೆಯಂತೆಯೇ ರಾಜಕೀಯದಲ್ಲಿ ಚತುರತೆ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಜನ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ತಂದೆ-ಮಗ ಮುಖ್ಯಮಂತ್ರಿಯಾದ ಉದಾಹರಣೆ ತೀರಾ ಕಡಿಮೆ. ಹೆಚ್.ಡಿ.ದೇವೇಗೌಡ ಮತ್ತು ಅವರ ಮಗ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹೊರತುಪಡಿಸಿದರೆ ಮತ್ತೊಬ್ಬ ತಂದೆ-ಮಗನ ಜೋಡಿ ಅಂದ್ರೆ ಎಸ್.ಆರ್.ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ!.. ರಾಜ್ಯದಲ್ಲಿ ತಂದೆ-ಮಗ ಮುಖ್ಯಮಂತ್ರಿ ಹುದ್ದೆಗೇರಿದ ಅಪರೂಪದ ಜೋಡಿ. ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಬಿ.ಎಸ್. ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಾಲ್ಯ ಜೀವನ: 28 ಜ.1960 ರಂದು ಹುಬ್ಬಳ್ಳಿಯಲ್ಲಿ ತಂದೆ ಸೋಮಪ್ಪ ತಾಯಿ ಗಂಗಮ್ಮ ಅವರ ಪುತ್ರರಾಗಿ ಜನಿಸಿದ ಬಸವರಾಜ ಬೊಮ್ಮಾಯಿ ಓದಿದ್ದು ಮೆಕ್ಯಾನಿಕ್ ಎಂಜಿನಿಯರಿಂಗ್. ಬೊಮ್ಮಾಯಿ-ಗಂಗಮ್ಮ ದಂಪತಿಯ ನಾಲ್ಕು ಮಕ್ಕಳಲ್ಲಿ (ಇಬ್ಬರು ಗಂಡು, ಇಬ್ಬರು ಹೆಣ್ಣು) ಹಿರಿಯ ಮಗನೇ ಬಸವರಾಜ ಬೊಮ್ಮಾಯಿ. ಹುಬ್ಬಳ್ಳಿಯ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಕೃಷಿ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ದಿನಗಳ ಕಾಲ ಪುಣೆಯ ಟಾಟಾ ಕಂಪನಿಯಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದರು. ಓದಿದ್ದು ಮೆಕ್ಯಾನಿಕ್ ಎಂಜಿನಿಯರಿಂಗ್ ಆಗಿದ್ದರೂ ಅವರ ಒಲವು ಹೆಚ್ಚಾಗಿ ಉದ್ಯಮ ಮತ್ತು ಕೃಷಿಯಾಗಿತ್ತು. ಇವರ ಪತ್ನಿ ಹೆಸರು ಚೆನ್ನಮ್ಮ. ಭರತ ಹಾಗೂ ಅಧಿತಿ ಎಂಬ ಇಬ್ಬರು ಮಕ್ಕಳನ್ನು ಹೊಂದಿರುವ ಬೊಮ್ಮಾಯಿ ಅವರಿಗೆ, ಕ್ರಿಕೆಟ್, ಗಾಲ್ಫ್ ಎಂದರೆ ಅಚ್ಚುಮೆಚ್ಚು. ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಧಾರವಾಡದ ಅಧ್ಯಕ್ಷರೂ ಅವರಾಗಿದ್ದರು. ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದರಿಂದ ಪಥ ಬದಲಿಸಿದ್ದು ಇತಿಹಾಸ. ಈಗ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಬೊಮ್ಮಾಯಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ರಾಜಕೀಯ ಜೀವನ: ಬಸವರಾಜ ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ ಅವರ ಜೇಷ್ಠ ಸುಪುತ್ರ. ತಂದೆಯಂತೆಯೇ ರಾಜಕೀಯದಲ್ಲಿ ಚತುರತೆ ಹೊಂದಿದ್ದಾರೆ. ಅದೇ ಅಭಿಲಾಸೆಯಿಂದ 1998 ರಲ್ಲಿ ರಾಜಕೀಯ ಜೀವನ ಆರಂಭಿಸಿದ ಬಸವರಾಜ ಬೊಮ್ಮಾಯಿ, ರಾಜಕಾರಣದ ಹಲವು ಏರಿಳಿತದ ಬಳಿಕ ಅಂದೆಯ ಬಳಿಕ ಮಗ ಕೂಡ ಮುಖ್ಯಮಂತ್ರಿ ಹುದ್ದೆಗೇರಿದ್ದು ಚರಿತ್ರೆ.

1998 ರಿಂದ 2008ರ ವರೆಗೆ ಜನತಾದಳದಲ್ಲಿದ್ದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2008 ರಲ್ಲಿ ಬೊಮ್ಮಾಯಿ ಜನತದಾಳ ತೊರೆದು ಬಿಜೆಪಿ ಸೇರ್ಪಡೆಯಾದರು. ಅಲ್ಲಿಂದ ಅವರ ರಾಜಕೀಯ ಜೀವನ ಇಂದಿನ ಮುಖ್ಯಮಂತ್ರಿ ಸ್ಥಾನ ಉಚ್ರಾಯಸ್ಥಿತಿಗೆ ತಂದು ನಿಲ್ಲಿಸಿದೆ. 2008 ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ (ಇದೇ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಭಾರಿಸಿದ್ದಾರೆ) ಬಸವರಾಜ ಬೊಮ್ಮಾಯಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜನಸಂಪನ್ಮೂಲ ಸಚಿವರನ್ನಾಗಿ ನೇಮಿಸಿದ್ದರು. ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ ಬೊಮ್ಮಾಯಿ, ಯಡಿಯೂರಪ್ಪನವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡರು. ನಂತರ 2019 ರಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾದಾಗ ಬಸವರಾಜ ಬೊಮ್ಮಾಯಿಗೆ ಸಿಕ್ಕಿದ್ದು ಗೃಹ ಖಾತೆ. 20 ಆಗಷ್ಟ್​ 2019 ರಿಂದ 26 ಜುಲೈ 2021ರ ವರೆಗೆ ಗೃಹ ಸಚಿರಾಗಿದ್ದ ಬೊಮ್ಮಾಯಿ ಕೆಲವೇ ದಿನಗಳ ಅಂತರದಲ್ಲಿ ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆಗತಾನೇ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬಿಜೆಪಿಯು, ಬಿಎಸ್ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ 28 ಜುಲೈ 2021 ರಂದು ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೂ ಮುನ್ನ ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿಯೂ ಬಸವರಾಜ ಬೊಮ್ಮಾಯಿ ಕಾರ್ಯ ನಿರ್ವವಹಿಸಿದ್ದಾರೆ.

ಬೊಮ್ಮಾಯಿ ಘೋಷಿತ ಆಸ್ತಿ: ಬಸವರಾಜ ಬೊಮ್ಮಾಯಿ ಅವರು 2008ರ ಚುನಾವಣೆ ವೇಳೆ ತಮ್ಮ ಬಳಿ ಸುಮಾರು 7 ಕೋಟಿ ರೂ. ಮೌಲ್ಯದ ಆಸ್ತಿ ಇವೆ ಎಂದು ಘೋಷಿಸಿದ್ದರು. 2013ರ ಚುನಾವಣೆ ವೇಳೆ ತಮ್ಮ ಬಳಿ ಸುಮಾರು 10.5 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದರು. ಇನ್ನು 2018ರ ಚುನಾವಣೆ ವೇಳೆ ತಮ್ಮ ಬಳಿ 8 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

ಓದಿ: ಸವದತ್ತಿ ಯಲ್ಲಮ್ಮ ದೇವಿ ದರ್ಶ‌ನ ಪಡೆದ ಸಿಎಂ ಬೊಮ್ಮಾಯಿ ದಂಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.