ETV Bharat / state

ಹಾವೇರಿ: ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವ ಕವಿತಾ ಸಾವಿನ ಪ್ರಕರಣ - ಹಾವೇರಿ ಕವಿತಾ ಸಾವು ಪ್ರಕರಣ

ಹಾವೇರಿ ಜಿಲ್ಲೆಯ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಕವಿತಾ ಸಾವು ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ದಿನಕಳೆದಂತೆ ಪ್ರಕರಣ ಕಗ್ಗಂಟಾಗುತ್ತಿದೆ.

Kavita death case
ಕವಿತಾ ಸಾವಿನ ಪ್ರಕರಣ
author img

By

Published : Aug 27, 2021, 8:55 PM IST

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಕವಿತಾ ಸಾವು ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ.

ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವ ಕವಿತಾ ಸಾವಿನ ಪ್ರಕರಣ

ಆ.23 ರಂದು ಮನೆಯಿಂದ ಕಾಲೇಜಿಗೆ ಹೋಗಿದ್ದ ಕವಿತಾ ಎಂಬ ಯುವತಿ ಶಿಗ್ಗಾಂವಿ ಸಮೀಪದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದರ ಬೆನ್ನಲ್ಲೆ ಪೊಲೀಸ್ ಇಲಾಖೆ ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅಧಿಕಾರಿಗಳ ತಂಡ ರಚಿಸಿ ತನಿಖೆ ಚುರುಕುಗೊಳಿಸಿದೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರಿಗೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿಯುತ್ತಿಲ್ಲ.

ಬಿಎ ದ್ವಿತೀಯ ತರಗತಿಯಲ್ಲಿ ಓದುತ್ತಿದ್ದ ಕವಿತಾ, ಆ.23 ರಂದು ಪರೀಕ್ಷೆ ಇರುವ ಕಾರಣ ಕಾಲೇಜಿಗೆ ಬಂದಿದ್ದಳು. ಮುಂಜಾನೆ ಕಾಲೇಜಿಗೆ ಎಂದು ಹೋದವಳ ಶವ ಸಂಜೆ ಪತ್ತೆಯಾಗಿದ್ದು, ಯಾಕೆ. ಕವಿತಾಳ ಕಿವಿಯಲ್ಲಿ ರಕ್ತ ಬಂದಿದ್ದು ಬಿಟ್ಟರೆ ದೇಹದಲ್ಲಿ ಹೇಳಿಕೊಳ್ಳುವಂತಹ ಗಾಯಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ಮನೆಯಲ್ಲಿ ಯಾವುದೇ ಜಗಳವಿಲ್ಲ. ಮಗಳು ಮನೆಯಲ್ಲಿ ಕಿಪ್ಯಾಡ್ ಮೊಬೈಲ್ ಬಳಿಸುತ್ತಿದ್ದಳು. ಅದನ್ನು ಬಿಟ್ಟರೆ ಬೇರೆ ಯಾರ ಜೊತೆ ಸಂಪರ್ಕವಿರಲಿಲ್ಲ. ನನ್ನ ಮಗಳು ನನಗೆ ಧೈರ್ಯ ತುಂಬುತ್ತಿದ್ದಳು. ಅಂತವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ನಂಬಲಿಕ್ಕಾಗುತ್ತಿಲ್ಲ. ಯಾರು ಕೊಲೆ ಮಾಡಿ ಹೊಂಡದಲ್ಲಿ ತಂದು ಹಾಕಿದ್ದಾರೆ ಎಂದು ಮೃತ ಕವಿತಾ ತಂದೆ ಮಲ್ಲೇಶಪ್ಪ ಆರೋಪಿಸುತ್ತಿದ್ದಾರೆ.

ಇನ್ನು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಪ್ರಕರಣವನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಓದಿ: Gangrape ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳು ಸಾಕಷ್ಟಿವೆ: ಡಿಜಿಪಿ ಪ್ರವೀಣ್ ಸೂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.