ಹಾವೇರಿ: ಕೊರೊನಾ ಹೊಸ ತಳಿ ಒಮಿಕ್ರಾನ್ ಸೋಂಕಿತರ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆ ಸನ್ನದ್ಧವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಆರ್. ಹಾವನೂರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ 74 ಐಸಿಯು ಸೇರಿದಂತೆ ಔಷಧಿ ಪರಿಕರ ಮತ್ತು ರಸಾಯನಿಕಗಳನ್ನು ಸರ್ಕಾರ ಈಗಾಗಲೇ ಪೂರೈಸಿದೆ. ಸದ್ಯ 74 ಐಸಿಯು ಖಾಲಿ ಇವೆ ಎಂದು ವೈದ್ಯಾಧಿಕಾರಿ ಹಾವನೂರು ತಿಳಿಸಿದರು.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿಗೆ ಬೆಡ್ ಮತ್ತು ಐಸಿಯು ಬಳಸಲಾಗುತ್ತಿದೆ. ಒಂದು ವೇಳೆ ಕೊರೊನಾ ರೋಗಿಗಳ ಸಂಖ್ಯೆ ಅಧಿಕವಾದರೆ ಎಲ್ಲ ಬೆಡ್ ಮತ್ತು ಐಸಿಯುಗಳನ್ನು ಕೊರೊನಾ ವಾರ್ಡಾಗಿ ಮಾರ್ಪಡಿಸಲಾಗುವುದು. ಜಿಲ್ಲಾಸ್ಪತ್ರೆಯನ್ನು ಕೊರೊನಾ ಆಸ್ಪತ್ರೆ ಎಂದು ಗುರುತಿಸಿ ಸಾಮಾನ್ಯ ರೋಗಿಗಳಿಗೆ ಬೇರೆ ಕಡೆ ಚಿಕಿತ್ಸೆ ನೀಡಲಾಗುವುದು ಎಂದರು.
ಇದನ್ನೂ ಓದಿ: ಕೋವಿಡ್ ರೂಪಾಂತರಿ Omicron ಭೀತಿ: ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಕೊರೊನಾ ಮೂರನೇ ಅಲೆ ಬಂದರೂ, ಆಕ್ಸಿಜನ್ ಸೇರಿದಂತೆ ಅಗತ್ಯವಾದ ಪರಿಕರಗಳನ್ನು ಜಿಲ್ಲಾಸ್ಪತ್ರೆ ಸಿದ್ಧಪಡಿಸಿಕೊಂಡಿದೆ. ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗದಂತೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.