ETV Bharat / state

ಸೇತುವೆ ಕಂ ಬ್ಯಾರೇಜ್ ಎತ್ತರಿಸುವಂತೆ ದೇವಗಿರಿ ಗ್ರಾಮಸ್ಥರ ಮನವಿ

ಹಾವೆರಿ ಜಿಲ್ಲಾಡಳಿತವನ್ನು ಜಿಲ್ಲೆಯ ಸವಣೂರು ತಾಲೂಕಿನ ವಿವಿಧ ಹಳ್ಳಿಗಳೊಂದಿಗೆ ಸಂಪರ್ಕಿಸುವ ಸೇತುವೆ ಮಳೆಗಾಲದಲ್ಲಿ ವರದಾನದಿಯಿಂದ ಜಲಾವೃತಗೊಳ್ಳುವುದು ಕಾಮನ್​ ಆಗಿದೆ. ಈ ಹಿನ್ನೆಲೆ ಸೇತುವೆ ಕಂ ಬ್ಯಾರೇಜ್ ನ್ನ ಎತ್ತರಿಸುವ ಕುರಿತಂತೆ 25 ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

Haveri: Devagiri villagers appeal to bridge come barrage repair
ಹಾವೇರಿ: ಸೇತುವೆ ಕಂ ಬ್ಯಾರೇಜ್ ಎತ್ತರಿಸುವಂತೆ ದೇವಗಿರಿ ಗ್ರಾಮಸ್ಥರು ಮನವಿ
author img

By

Published : Aug 12, 2020, 9:21 AM IST

ಹಾವೆರಿ: ಮಳೆಗಾಲ ಆರಂಭವಾದರೆ ಸಾಕು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಸೇರಿದಂತೆ 25 ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡುತ್ತೆ. ಇದಕ್ಕೆ ಕಾರಣ ಈ ಗ್ರಾಮದಿಂದ ಜಿಲ್ಲಾಡಳಿತ ಸಂಪರ್ಕಿಸುವ ಸೇತುವೆ ವರದಾನದಿಯಿಂದ ಜಲಾವೃತಗೊಳ್ಳುವುದು. ಸೇತುವೆ ಕಂ ಬ್ಯಾರೇಜ್ ಅನ್ನು ಎತ್ತರಿಸುವ ಕುರಿತಂತೆ 25 ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ಹಾವೇರಿ: ಸೇತುವೆ ಕಂ ಬ್ಯಾರೇಜ್ ಎತ್ತರಿಸುವಂತೆ ದೇವಗಿರಿ ಗ್ರಾಮಸ್ಥರು ಮನವಿ

ಹಾವೇರಿ ಜಿಲ್ಲೆಯಲ್ಲಿ ಹರಿಯುವ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪರಿಣಾಮ ವರದಾ, ಧರ್ಮಾ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಜಿಲ್ಲೆಯಲ್ಲಿ ವರದಾ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ಹಲವು ಸೇತುವೆಗಳು ಜಲಾವೃತಗೊಳ್ಳುತ್ತವೆ. ಅದರಲ್ಲಿ ಒಂದು ಹಾವೇರಿ ಜಿಲ್ಲಾಕೇಂದ್ರ ದೇವಗಿರಿ ಮತ್ತು ಸವಣೂರು ತಾಲೂಕಿನ 25 ಹಳ್ಳಿಗಳನ್ನು ಸಂಪರ್ಕಿಸುವ ಸೇತುವೆ. ಈ ಸೇತುವೆ ಕಂ ಬ್ಯಾರೇಜ್ ಅನ್ನು ಅವಲಂಭಿಸಿರುವ 25 ಗ್ರಾಮಗಳ ಜನ ಬೇರೆ ಮಾರ್ಗದ ಮೂಲಕ ಜಿಲ್ಲಾಡಳಿತ ಕಚೇರಿಗೆ ಬರುವಂತಾಗಿದೆ. ಹತ್ತು ಕಿ.ಮೀ ದೂರದ ಅಂತರವನ್ನ 30 ಕಿ.ಮೀ ಸುತ್ತುಬಳಸಿ ಹಾವೇರಿ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಹಲವು ಜನರ ಜಮೀನುಗಳು ನದಿಯಾಚೆಗೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳಿಗೆ ತೆರಳಬೇಕಾದರೂ ಸುತ್ತುಬಳಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಮಳೆಗಾಲ ಬಂದರೆ ಸಾಕು ತಮಗೆ ಈ ಪರಿಸ್ಥಿತಿ ನಿರ್ಮಾಣವಾಗುತ್ತೆ ಎನ್ನುತ್ತಾರೆ ಗ್ರಾಮಸ್ಥರು. ಸವಣೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಸೇತುವೆಯನ್ನ ಅವಲಂಭಿಸಿದ್ದಾರೆ. ಸರ್ಕಾರ ಆದಷ್ಟು ಬೇಗ ಈ ಸೇತುವೆ ಕಂ ಬ್ಯಾರೇಜ್‌ ಅನ್ನು ಮೇಲೆ ಏರಿಸುವಂತೆ ಒತ್ತಾಯಿಸಿದ್ದಾರೆ.

ಮಳೆಗಾಲದ ಸಂದರ್ಭ ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಮೂರು ಸೇತುವೆಗಳನ್ನು ಆಪೋಷನ ತಗೆದುಕೊಳ್ಳುತ್ತದೆ. ಅದರಲ್ಲಿ ಕಳಸೂರು ಮತ್ತು ದೇವಗಿರಿ ಪ್ರಮುಖವಾದದು. ಇದರಂತೆ ನಾಗನೂರು ಮತ್ತು ಕೂಡಲ ಹಾಗೂ ಲಕಮಾಪುರ ಬಾಳಂಬೀಡ್ ಸಂಪರ್ಕಿಸುವ ಸೇತುವೆ ಸಹ ಮುಳುಗಡೆಯಾಗುತ್ತವೆ. ಕೂಡಲದಲ್ಲಿ ಸೇತುವೆ ಮೇಲೇರಿಸುವ ಕಾಮಗಾರಿ ಆರಂಭವಾಗಿದೆ. ಆದರೆ, ಉಳಿದೆರಡು ಕಡೆ ಇನ್ನೂ ಯೋಜನೆ ರೂಪಿಸಿಲ್ಲ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.