ಹಾವೇರಿ: ಮುದ್ರಾಣಾಲಯಗಳ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದು, ಸಭೆ-ಸಮಾರಂಭಗಳು ನಡೆಯದ ಕಾರಣ ಯಾವುದೇ ಆಮಂತ್ರಣ ಪತ್ರಿಕೆಗಳು ಮುದ್ರಣಗೊಂಡಿಲ್ಲ. ಇದರಿಂದ ಅವುಗಳ ಮಾಲೀಕರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಮುಖ ಮುದ್ರಾಣಾಲಯಗಳು ಕದ ಹಾಕಿದ ಕಾರಣ ಬಹುತೇಕ ಉಪಕರಣಗಳು ಮತ್ತು ಯಂತ್ರಗಳನ್ನು ಧೂಳು ತಿನ್ನುತ್ತಿದೆ. ಅದಲ್ಲದೆ, ಕೊರೊನಾ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಆದಾಯಕ್ಕೆ ಕತ್ತರಿ ಬಿದ್ದಿದೆ. ಹೀಗಾಗಿ, ಕಾರ್ಮಿಕರಿಗೆ ಸಂಬಳ ಇಲ್ಲದಂತಾಗಿದೆ. ಹೀಗಾಗಿ, ಕಾರ್ಮಿಕರು ಕೆಲಸ ಬಿಟ್ಟಿದ್ದಾರೆ.
ಇನ್ನು ಪುಸ್ತಕಗಳ ಮುದ್ರಣ ದೂರದ ಮಾತು. ತೀವ್ರ ನಷ್ಟಕ್ಕೆ ಒಳಗಾಗಿದ್ದೇವೆ ಎಂದು ಮುದ್ರಣಾಲಯಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. ಗುಡಿ ಕೈಗಾರಿಕೆಗಳ ಪ್ರೋತ್ಸಾಹಿಸಲು ಮುಂದಾಗುವಂತೆ ಮನವಿ ಮಾಡಿದ್ದಾರೆ.