ETV Bharat / state

ಈಗಿನ ಸಮೀಕ್ಷೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯೋ ಅಥವಾ ಜಾತಿ ಗಣತಿ ಸಮೀಕ್ಷೆಯೋ? ಸ್ಪಷ್ಟಪಡಿಸುವಂತೆ ಮಾಜಿ ಸಿಎಂ ಒತ್ತಾಯ - ಜಾತಿ ಗಣತಿ ಸಮೀಕ್ಷೆ

ಒಬ್ಬರದ್ದು ಒಂದು ದಾರಿಯಾದರೆ, ಅದಕ್ಕೆ ತದ್ವಿರುದ್ಧವಾಗಿ ಮತ್ತೊಬ್ಬರದ್ದು ಮತ್ತೊಂದು ದಾರಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ​ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Oct 7, 2023, 6:10 PM IST

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ: ಜಾತಿಗಣತಿ ಬಹಿರಂಗಕ್ಕೆ ಬಿಜೆಪಿ ವಿರೋಧಪಡಿಸುವ ಕುರಿತಂತೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಮಾತನಾಡಿದ ಅವರು, ಎಲ್ಲಿಯೂ ಜಾತಿ ಗಣತಿ ಆದೇಶ ಇಲ್ಲ. ಆದರೆ, ಇದೀಗ ಜಾತಿ ಗಣತಿ ಎಂದು ಬಿಂಬಿಸಲಾಗುತ್ತಿದೆ. ಈಗ ಆಗಿರುವ ಸಮೀಕ್ಷೆ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೋ ಅಥವಾ ಜಾತಿ ಗಣತಿ ಸಮೀಕ್ಷೆಯೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಎರಡಲ್ಲಿ ಯಾವುದೆಂದು ಅವರೇ ಹೇಳಲಿ. ಎಲ್ಲ ವಿಚಾರದಲ್ಲಿಯೂ ಮುಖ್ಯಮಂತ್ರಿ ಒಂದು ದಾರಿ ಹಿಡಿದರೆ, ಉಪಮುಖ್ಯಗಳದ್ದೇ ಮತ್ತೊಂದು ದಾರಿ ಇದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ನೀರು ಬಿಡಲ್ಲವೆಂದು ಸಿದ್ದರಾಮಯ್ಯನವರು ಹೇಳಿದರೆ, ಅವರು ಹೇಳಿದ ಎರಡು ಗಂಟೆಯಲ್ಲಿ ನೀರು ಬಿಟ್ಟ ಉದಾಹರಣೆಯನ್ನು ನಾವು ನೋಡಿದ್ದೇವೆ. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲಾಗುತ್ತದೆ ಎಂದು ಸಿಎಂ ಹೇಳಿದರೆ, ಗ್ಯಾರಂಟಿಗಳಿಂದ ಹಣ ನೀಡಲಾಗಲ್ಲ ಎಂದು ಡಿಸಿಎಂ ಹೇಳುತ್ತಾರೆ. ಒಬ್ಬರದ್ದು ಒಂದು ದಾರಿಯಾದರೆ, ಅದಕ್ಕೆ ತದ್ವಿರುದ್ಧವಾಗಿ ಮತ್ತೊಬ್ಬರದ್ದು ಮತ್ತೊಂದು ದಾರಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ​ ವಿರುದ್ಧ ಮಾಜಿ ಸಿಎಂ ವಾಗ್ದಾಳಿ ನಡೆಸಿದರು.

ಬಾರ್ ಲೈಸನ್ಸ್ ವಿಚಾರದಲ್ಲಿ ಸಿಎಂ, ಡಿಸಿಎಂ ದ್ವಂದ್ವ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಆಯಕಟ್ಟಿನ ಸ್ಥಳಗಳಲ್ಲಿ ಕೊಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಇದಾರೋ ಅಥವಾ ಸೂಪರ್ ಸಿಎಂ ಇದಾರೋ ಅನ್ನೋದೇ ಗೊತ್ತಾಗುತ್ತಿಲ್ಲ. ಇವರ ದ್ವಂದ್ವದ ನಿಲುವು ಮತ್ತು ಹೇಳಿಕೆಗಳು ರಾಜ್ಯದ ಜನರ ಮೇಲೆ ಪರಿಣಾಮ ಬೀರುತ್ತಿವೆ. ಒಂದು ನೀತಿ ಮಾಡಿದಾಗ ಸರ್ಕಾರ ಅದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.

ಬರಗಾಲ ಸಮರ್ಥವಾಗಿ ನಿಭಾಯಿಸುತ್ತೇವೆ ಎನ್ನುವ ಹೇಳಿಕೆಯಿಂದ ಬರಗಾಲ ಸಮರ್ಥವಾಗಿ ಎದುರಿಸೋಕೆ ಆಗೊಲ್ಲ. ನಾವು ಇಂತಹ ಹೇಳಿಕೆ ಬಹಳ ನೋಡಿದ್ದೇವೆ. ಬಿಡಿಗಾಸು ಸಹ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಪತ್ರ ಬರೆಯಲಾಗಿದೆ, ಹಾಗಾಗಿ ಮತ್ತೊಂದು ತಂಡ ಬರುತ್ತದೆ ಅಂತಾ ಹೇಳುತ್ತಿದ್ದಾರೆ. ಆದರೆ, ಅತಿವೃಷ್ಠಿಯಾದಾಗ ನಾವು ಯಾವುದಕ್ಕೂ ಕಾಯಲಿಲ್ಲ. ಕೂಡಲೆ ಹಣ ಕೊಟ್ಟು ಪರಿಹಾರ ನೀಡಿದ್ದೇವೆ. ಸುಮಾರು ಎರಡು ಸಾವಿರ ಕೋಟಿಗೂ ಅಧಿಕ ಹಣ ತಕ್ಷಣ ಬಿಡುಗಡೆ ಮಾಡಿದ್ದೆವು. ರಾಜ್ಯ ಬೊಕ್ಕಸದಿಂದ ಸಹಾಯ ಮಾಡಬಹುದು, ಕುಂಟು ನೆಪ ಹೇಳಿ ಮುಂದಕ್ಕೆ ಹಾಕಲೂಬಹುದು ಎಂದು ರಾಜ್ಯ ಸರ್ಕಾರದ ನಡೆಗೆ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಮೂರು ತಾಲೂಕು ಬರಪೀಡಿತ ಪ್ರದೇಶ ಘೋಷಣೆ ವಿಳಂಬವಾಗಿರುವ ಕುರಿತಂತೆ ಕಂದಾಯ ಸಚಿವರ ಬಳಿ ಮಾತಾಡಿದ್ದೇನೆ. ಮತ್ತೊಮ್ಮೆ ವರದಿ ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಸೋಮವಾರದೊಳಗೆ ಈ ತಾಲೂಕು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರುತ್ತವೆ ಎಂದು ರೈತರಿಗೆ ಬೊಮ್ಮಾಯಿ ಭರವಸೆ ನೀಡಿದರು.

ಇದನ್ನೂ ಓದಿ: ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.