ಹಾವೇರಿ: ವಾರ್ಷಿಕ ಸರಾಸರಿ 776 ಮಿ.ಮೀಟರ್ ವಾಡಿಕೆ ಮಳೆಯಾಗುವ ಜಿಲ್ಲೆ ಹಾವೇರಿ. ಏಳು ತಾಲೂಕುಗಳು ಅರೆ ಮಲ್ನಾಡು ಪ್ರದೇಶದಲ್ಲಿ ಬಂದರೆ ಹಾನಗಲ್ ತಾಲೂಕು ಮಲ್ನಾಡು ಪ್ರದೇಶದಲ್ಲಿ ಬರುತ್ತದೆ. ಪ್ರಸ್ತುತ ಮುಂಗಾರು ಪೂರ್ವ ಮಳೆ ನಿಗದಿತ ಪ್ರಮಾಣದಲ್ಲಿ ಸುರಿಯದಿರುವುದು ಜಿಲ್ಲೆಯ ಅನ್ನದಾತರಾಗಿ ಆತಂಕವನ್ನು ಉಂಟುಮಾಡಿದೆ. ಇತ್ತ ರಾಜ್ಯಕ್ಕೆ ಆಗಮಿಸಲಿರುವ ಮುಂಗಾರು ಮೋಡಗಳು ಸಹ ರಾಜ್ಯಕ್ಕೆ ಆಗಮಿಸುವುದು ತಡವಾಗುತ್ತಿದೆ.
ಇದರ ಮಧ್ಯ ಜಿಲ್ಲೆಯ ರೈತರು ಮುಂಗಾರು ಮಳೆಗೆ ಭೂಮಿಯನ್ನ ಹದಮಾಡಿಟ್ಟುಕೊಂಡಿದ್ದಾರೆ. ಒಂದು ಉತ್ತಮ ಮಳೆಯಾದರೆ ಬಿತ್ತನೆ ಮಾಡುವ ಇಂಗಿತವನ್ನ ರೈತರು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಜಿಲ್ಲಾ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ಮುಂಗಾರು ಬಿತ್ತನೆಗೆ ಬೇಕಾದ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಜಿಲ್ಲೆಗೆ ಬೇಕಾಗುವ ಬಿತ್ತನೇ ಬೀಜ ಮತ್ತು ಗೊಬ್ಬರ ವಿತರಣಿಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ ರೈತರು ಪ್ರಮುಖವಾಗಿ ಗೋವಿನಜೋಳ, ಸೋಯಾಬಿನ್, ಶೇಂಗಾ, ಭತ್ತ ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಾರೆ.
ಈ ಬೆಳೆಗಳಲ್ಲಿ ಪ್ರಸ್ತುತ ಮುಂಗಾರಿನಲ್ಲಿ ಹಾವೇರಿ ಜಿಲ್ಲೆ ಮಕ್ಕೆಜೋಳ ಅತಿಹೆಚ್ಚು ರೈತರು ಬೆಳೆಯುವ ಬೆಳೆಯಾಗಿದೆ. ಕೃಷಿ ಇಲಾಖೆ ಜಿಲ್ಲೆಯ ಮೂರು ಲಕ್ಷ ಮೂವತ್ತಾರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಂಡಿದೆ. ಅದರಲ್ಲಿ ಪ್ರಮುಖ 2 ಲಕ್ಷ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಅಂದರೆ ಜಿಲ್ಲೆಯ ಒಟ್ಟು ಬೆಳೆಗಳಲ್ಲಿ ಮೆಕ್ಕೆಜೋಳ ಶೇ 61 ರಷ್ಟು ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗುತ್ತಿದೆ.
46702 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 33715 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 15401 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 8416 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 567 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 2048 ಹೆಕ್ಟೇರ್ ಪ್ರದೇಶದಲ್ಲಿ ತೃಣಧಾನ್ಯಗಳನ್ನ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ಜಿಲ್ಲೆಯಲ್ಲಿ ಸುಮಾರು 53 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. 19 ರೈತ ಸಂಪರ್ಕ ಕೇಂದ್ರಗಳು, 12 ಇತರೆ ಮತ್ತು 22 ಹೆಚ್ಚುವರಿ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ.
ಆದರೆ ಈ ಕೇಂದ್ರಗಳಲ್ಲಿ ಈಗ ಕೇವಲ ಶೇಂಗಾ ಮತ್ತು ಸೋಯಾಬಿನ್ ಬಿತ್ತನೆ ಬೀಜ ಮಾತ್ರ ಮಾರಾಟಕ್ಕೆ ಸಿಗುತ್ತಿದೆ. ಈ ಬಾರಿ ಹೊಸ ತಂತ್ರಾಂಶ ಬಳಿಸುತ್ತಿದ್ದು ಬಿತ್ತನೆ ಬೀಜಗಳ ಪಾಕೀಟ್‌ಗಳ ಮೇಲೆ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದರ ತಂತ್ರಾಂಶ ಕೆಕಿಸಾನ ತಂತ್ರಾಂಶಕ್ಕೆ ಸೇರುತ್ತೆ. ಬೀಜ ನೀಡುವಾಗ ಮೊಬೈಲ್ ನಂಬರ್ ಓಟಿಪಿ ಬರುತ್ತದೆ. ಮತ್ತು ಆಧಾರ ಕಾರ್ಡ್, ಉತಾರ್ ಸೇರಿದಂತೆ ವಿವಿಧ ದಾಖಲೆಗಳನ್ನ ಕೇಳುತ್ತಾರೆ. ದಾಖಲೆಗಳನ್ನು ನೀಡಲು ಪರಿಶೀಲನೆ ಮಾಡಲು ಸ್ವಲ್ಪ ಸಮಯ ಹೆಚ್ಚಿಗೆ ಬೇಕಾಗುತ್ತೆ. ರೈತರು ತಾಳ್ಮೆ ಕಳೆದುಕೊಳ್ಳದೆ ಸ್ವಲ್ಪ ಸಮಯವಾದರೂ ಪರ್ವಾಗಿಲ್ಲಾ ಸರತಿಯಲ್ಲಿ ನಿಂತು ಬಿತ್ತನೆ ಬೀಜಗಳನ್ನ ಪಡೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಮಧ್ಯೆ ಎಲ್ಲ ರೈತ ಸಮುದಾಯ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲಾ ಎಂದು ರೈತರು ಆರೋಪಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಸಿಗಬೇಕು. ದಾಖಲೆಗಳಿಗಾಗಿ ಕೃಷಿ ಕೇಂದ್ರದ ಸಿಬ್ಬಂದಿ ಅಲೆದಾಡಿಸುತ್ತಿದ್ದಾರೆ. ಮೊದಲು ಯಾವ ರೀತಿ ರೈತ ಕೇಂದ್ರ ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಿದಂತೆ, ಬೀಜ ವಿತರಿಸಿದರೆ ರೈತರಿಗೆ ಹಣ ಉಳಿಯುತ್ತೆ. ಇಲ್ಲದಿದ್ದರೆ ಬಾಡಿಗೆ ಬಸ್ ಚಾರ್ಚ್ ಅಂತಾ ರೈತರು ಹಣ ಖರ್ಚಗುತ್ತದೆ ಎನ್ನುತ್ತಾರೆ ರೈತರು.
ಜಿಲ್ಲಾಡಳಿತ ಬಿತ್ತನೆ ಬೀಜ ವಿತರಣೆಯೇನು ಮಾಡುತ್ತಿದೆ. ಆದರೆ ಬಿತ್ತನೆಯಾಗಿ ಬೆಳೆ ಬೆಳೆಯಲು ಬೇಕಾಗುವಷ್ಟು ಗೊಬ್ಬರವನ್ನ ಸಹ ನೀಡಬೇಕು. ಇದಕ್ಕಾಗಿ ಸಮರ್ಪಕವಾಗಿ ಯೂರಿಯಾ ಸೇರಿದಂತೆ ವಿವಿಧ ಗೊಬ್ಬರಗಳನ್ನ ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವುದೇ ಗೊಬ್ಬರ ಕೊರತೆಯಾದರೆ ರೈತ ಸಂಘಟನೆಗಳು ಪ್ರತಿಭಟನೆಗೆ ಇಳಿಯುತ್ತವೆ ಎಂಬ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.
ಇದನ್ನೂ ಓದಿ:ಪೂರ್ಣವಾಗದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ: ಗುಡ್ಡ ಕುಸಿತ ಆತಂಕದಲ್ಲಿ ವಾಹನ ಸವಾರರು