ETV Bharat / state

ರೈತರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವೆ: ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ - ರೈತರಿಂದ ರಾಣೆಬೆನ್ನೂರಿನಲ್ಲಿ ಪ್ರತಿಭಟನೆ

ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೈ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.

farmers protest in Ranebennur,ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
author img

By

Published : Jan 29, 2020, 5:11 AM IST

ರಾಣೆಬೆನ್ನೂರ: ಖಾಯಂ ಭೂ ಸ್ವಾಧೀನ ಅಧಿಕಾರಿ ನೇಮಕಕ್ಕೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಆದಷ್ಟು ಬೇಗ ರೈತರಿಗೆ ಪರಿಹಾರ ಕೊಡಿಸುತ್ತೇನೆ ಎಂದು ಪ್ರತಿಭಟನಾ ನಿರತ ರೈತರಿಗೆ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಕಳೆದ ಮೂರು ದಿನಗಳಿಂದ ನಗರದ ಮಾಗೋಡ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೈ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು. ರೈತರಿಗೆ ಪರಿಹಾರ ದೊರಕದ ಕುರಿತು ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನು ವಕೀಲ ಎಸ್.ಡಿ.ಹಿರೇಮಠ ಮಾತನಾಡಿ 2002-03ರಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಇಲ್ಲಿಯ ಕಚೇರಿಗೆ ಯಾವುದೇ ಭೂ ಸ್ವಾಧೀನ ವಿಶೇಷ ಅಧಿಕಾರಿ ಬಂದರೂ ಕೇವಲ 5 ತಿಂಗಳಲ್ಲಿ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಹೀಗಾಗಿ ರೈತರು ಸಲ್ಲಿಸಿದ ಅರ್ಜಿ ಸಮಯ ವಿಳಂಬದಿಂದ ವಿಸೆಟ್ ಆಗುತ್ತಿವೆ. ಇದೇ ರೀತಿ ವರ್ಷಗಳೇ ಉರುಳುತ್ತಾ ಬಂದಿವೆ. ರೈತರು ಪರಿಹಾರವಿಲ್ಲದೆ ಪರದಾಡುತ್ತಿದ್ದಾರೆ. ಆದ್ದರಿಂದ ರಾಣೆಬೆನ್ನೂರ ಯುಟಿಪಿ ಕಚೇರಿಗೆ ಖಾಯಂ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಬೇಕು. ಫೆ. 17ರೊಳಗೆ ಎಲ್ಲ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಅಸಹಕಾರ ಚಳವಳಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.

Intro:Kn_rnr_02_Dc_visit_farmer_protest_place_kac10001.

ರೈತರ ಸಮಸ್ಯೆ ಬಗೆ ಹರಿಸುವೆ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ.

ರಾಣೆಬೆನ್ನೂರ: ಖಾಯಂ ಭೂ ಸ್ವಾಧೀನ ಅಧಿಕಾರಿ ನೇಮಕಕ್ಕೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಆದಷ್ಟು ಬೇಗ ರೈತರಿಗೆ ಪರಿಹಾರ ಕೊಡಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಹೇಳಿದರು.

Body:ಕಳೆದ ಮೂರು ದಿನಗಳಿಂದ ನಗರದ ಮಾಗೋಡ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು.
ರೈತರಿಗೆ ಪರಿಹಾರ ದೊರಕದ ಕುರಿತು ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನು ವಕೀಲ ಎಸ್.ಡಿ.ಹಿರೇಮಠ ಮಾತನಾಡಿ 2002-03ರಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಇಲ್ಲಿಯ ಕಚೇರಿಗೆ ಯಾವುದೇ ಭೂ ಸ್ವಾಧೀನ ವಿಶೇಷ ಅಧಿಕಾರಿ ಬಂದರೂ ಕೇವಲ 5 ತಿಂಗಳಲ್ಲಿ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಹೀಗಾಗಿ ರೈತರು ಸಲ್ಲಿಸಿದ ಅರ್ಜಿ ಸಮಯ ವಿಳಂಬದಿಂದ ವಿಸೆಟ್ ಆಗುತ್ತಿವೆ. ಇದೇ ರೀತಿ ವರ್ಷಗಳೇ ಉರುಳುತ್ತ ಬಂದಿವೆ. ರೈತರು ಪರಿಹಾರವಿಲ್ಲದೇ ಪರದಾಡುತ್ತಿದ್ದಾರೆ. ಆದ್ದರಿಂದ ರಾಣೆಬೆನ್ನೂರ ಯುಟಿಪಿ ಕಚೇರಿಗೆ ಖಾಯಂ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಬೇಕು. ಫೆ. 17ರೊಳಗೆ ಎಲ್ಲ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಅಸಹಕಾರ ಚಳವಳಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಸಮ್ಮತಿ ಸೂಚಿಸಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.

Conclusion:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ. ದೇವರಾಜ, ಡಿವೈಎಸ್ಪಿ ಟಿ.ವಿ. ಸುರೇಶ, ತಹಸೀಲ್ದಾರ್ ಬಸವನಗೌಡ ಕೋಟೂರು, ಯುಟಿಪಿ ಇಂಜನೀಯರ ಎಂ.ಬಿ.ರವಿ ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.