ETV Bharat / state

ಹಾವೇರಿಯಲ್ಲಿ ದಸರಾ ಸಡಗರ ! ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು - ಶಮೀವೃಕ್ಷ ಪೋಜೆ

ಜಿಲ್ಲಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ದಸರಾ ಕೊನೆ ದಿನವಾದ  ಇಂದು ಮಹಿಳೆಯರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಹತ್ತು ದಿನಗಳ ಆಚರಣೆ ಪೂರ್ಣಗೊಳಿಸಿದರು. ಒಂಭತ್ತು ದಿನಗಳ ಕಾಲ ಮುಂಜಾನೆ 4 ಗಂಟೆಯಿಂದ ಮಹಿಳೆಯರು ಶಮೀವೃಕ್ಷ ಪೂಜಿಸುತ್ತಾ ದೇವಿಯ ಕೃಪೆಗೆ ಪಾತ್ರರಾಗಿರುತ್ತಾರೆ

ಹಾವೇರಿ ದಸರ
author img

By

Published : Oct 8, 2019, 2:49 PM IST

ಹಾವೇರಿ : ಜಿಲ್ಲಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ದಸರ ಕೊನೆಯ ದಿನವಾದ ಇಂದು ಮಹಿಳೆಯರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಹತ್ತು ದಿನಗಳ ಆಚರಣೆ ಪೂರ್ಣಗೊಳಿಸಿದರು.

ಒಂಭತ್ತು ದಿನಗಳ ಕಾಲ ಮುಂಜಾನೆ 4 ಗಂಟೆಯಿಂದ ಮಹಿಳೆಯರು ಶಮೀವೃಕ್ಷಕ್ಕೆ ಪೂಜಿಸುತ್ತ ದೇವಿಯ ಕೃಪೆಗೆ ಪಾತ್ರರಾಗಿರುತ್ತಾರೆ.

ನಿತ್ಯ ಆರತಿ ಹಿಡಿದು ವೃಕ್ಷಕ್ಕೆ ಸೀರೆ ಉಡಿಸಿ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಮಹಿಳೆಯರು ಪರಸ್ಪರ ಉಡಿ ತುಂಬಿ ಅರಿಶಿಣ ಕುಂಕುಮ ಹಂಚುವುದು ವಿಶೇಷ. ವಿಜಯದಶಮಿಯ ಕಡೆಯ ದಿನ ಮುಂಜಾನೆಯಿಂದ ಆರಂಭವಾಗುವ ಪೂಜೆ ಸಂಜೆಯವರೆಗೂ ನಡೆಯುತ್ತದೆ. ಸಂತಾನಭಾಗ್ಯ, ಕಂಕಣಭಾಗ್ಯಕ್ಕಾಗಿ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ಬನ್ನಿ ಮುಡಿಯುವ ಮೂಲಕ ಪ್ರಸ್ತುತ ವರ್ಷದ ದಸರಾಕ್ಕೆ ತೆರೆ ಬೀಳುತ್ತದೆ.

Intro:FileBody:FileConclusion:File
ETV Bharat Logo

Copyright © 2025 Ushodaya Enterprises Pvt. Ltd., All Rights Reserved.