ಹಾವೇರಿ : ಜಿಲ್ಲೆಯ ಸವಣೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡು ಮೂರು ದಿನಗಳು ಕಳೆದಿವೆ. ಮುಂಬೈಯಿಂದ ಸವಣೂರಿಗೆ ಆಗಮಿಸಿದ್ದ ಮೂವರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಮಗನಿಗೆ ನೆಗೆಟಿವ್ ವರದಿ ಬಂದಿದೆ.
ಅಲ್ಲದೆ ಮೊದಲ ಸೋಂಕಿತನ ಪ್ರಥಮ ಸಂಪರ್ಕದಲ್ಲಿದ್ದ 21 ಶಂಕಿತರ ವರದಿ ನೆಗಟಿವ್ ಬಂದಿರುವುದು ಸ್ವಲ್ಪ ನೆಮ್ಮದಿ ಮೂಡಿಸಿದೆ. ಆದರೂ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಓಡಾಡುವಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಹೊರ ರಾಜ್ಯಗಳಿಂದ ಸುಮಾರು 40 ಜನ ಹಾವೇರಿಗೆ ಆಗಮಿಸಿದ್ದಾರೆ.
ಬೇರೆ ಜಿಲ್ಲೆಗಳಲ್ಲಿ ದುಡಿಯಲು ಹೋಗಿದ್ದ 722 ಜನ ಹಾವೇರಿಗೆ ಆಗಮಿಸಿದ್ದಾರೆ. ಇವರನ್ನೆಲ್ಲಾ ತಪಾಸಣೆಗೆ ಒಳಪಡಿಸಿ ಮನೆಗಳಲ್ಲಿ ಮತ್ತು ಸಾಂಸ್ಥಿಕ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.