ETV Bharat / state

ಗ್ರಾಮಸ್ಥರ ಮುಂಜಾಗ್ರತೆ: ಕರ್ಜಗಿ ಗ್ರಾಮದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

ಹಾವೇರಿಯ ನಗರದ ಸಮೀಪದಲ್ಲಿರುವ ಕರ್ಜಗಿ ಗ್ರಾಮದಲ್ಲಿ ಗ್ರಾಮಸ್ಥರ ಮುಂಜಾಗ್ರತೆಯಿಂದಾಗಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.

Haveri
ಕರ್ಜಗಿ ಗ್ರಾಮದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ
author img

By

Published : Jun 17, 2021, 6:51 AM IST

Updated : Jun 17, 2021, 7:01 AM IST

ಹಾವೇರಿ: ನಗರಕ್ಕೆ ಸಮೀಪವಿರುವ ಗ್ರಾಮಗಳಲ್ಲಿ ಒಂದಾದ ಕರ್ಜಗಿ ಗ್ರಾಮದಲ್ಲಿ 20 ಸಾವಿರ ಜನಸಂಖ್ಯೆಯಿದೆ. ಕೊರೊನಾ ಮೊದಲನೇ ಅಲೆಯಲ್ಲಿ ಗ್ರಾಮದ 30 ಜನರಿಗೆ ಕೊರೊನಾ ವಕ್ಕರಿಸಿತ್ತು. ಜೊತೆಗೆ ಐವರು ಸಾವನ್ನಪ್ಪಿದ್ದರು. ಹೀಗಾಗಿ ಎರಡನೇ ಅಲೆ ತೀವ್ರತೆ ಬಗ್ಗೆ ಅರಿತ ಕರ್ಜಗಿ ಗ್ರಾಮ ಪಂಚಾಯಿತಿ ಸದಸ್ಯರು, ರಾಜ್ಯ ಸರ್ಕಾರ ಘೋಷಿಸುವ ಮುನ್ನವೇ ಗ್ರಾಮದಲ್ಲಿ ಲಾಕ್​​​​​​​ಡೌನ್ ಘೋಷಿಸಿದ್ದರು.

ಕರ್ಜಗಿ ಗ್ರಾಮದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

ಗ್ರಾಮದ ಪ್ರತಿ ಓಣಿ, ರಸ್ತೆಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಿ, ಶುಚಿತ್ವ ಕಾಪಾಡಿಕೊಳ್ಳಲಾಯಿತು. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ತಪಸಾಣೆ ನಡೆಸಿ, ಕ್ವಾರಂಟೈನ್ ಮಾಡಲಾಯಿತು. ಇದರಿಂದಾಗಿ ಕರ್ಜಗಿ ಗ್ರಾಮದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಆಸ್ಪತ್ರೆಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿದರೆ ಗ್ರಾಮವನ್ನ ಕೊರೊನಾ ಮುಕ್ತ ಮಾಡುವ ಇಂಗಿತವನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಒಂದು ಕರೆ ಮಾಡಿದರೆ ಸಾಕು, ಹಸಿದವರ ಬಳಿಯೇ ಬರುತ್ತೆ ಊಟ

Last Updated : Jun 17, 2021, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.